ಕೈ ಬಿಡದಂತೆ ಲಕ್ಷ್ಮಣ್ ಸವದಿಗೆ ಡಿ ಕೆ ಶಿವಕುಮಾರ್ ಕೊಟ್ಟ ಬಿಗ್ ಆಫರ್ ?

Views: 79
ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದ ಬಳಿಕ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹಲವು ಹಿರಿಯ ನಾಯಕರನ್ನು ಕರೆತರುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆದಿದ್ದು, ಅದರಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತಂದಿದ್ದಾರೆ.
ಇದೀಗ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಗೆ ಕರೆತರುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಜವಾಬ್ದಾರಿ ನೀಡಿದ್ದು, ಡಿ ಕೆ ಶಿವಕುಮಾರ್ ಪಕ್ಷದಲ್ಲೇ ಉಳಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ.
ಇತ್ತ ಬಿಜೆಪಿಗೆ ಲಕ್ಷ್ಮಣ್ ಸವದಿ ಅವರು ಮರು ಸೇರ್ಪಡೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈಗಾಗಲೇ ಲಕ್ಷ್ಮಣ್ ಸವದಿ ಅವರ ಜೊತೆಗೆ ಸುದೀರ್ಘ ಚರ್ಚೆಯನ್ನು ನಡೆಸಿದ್ದಾರೆ. ಈ ವೇಳೆ ನಾನು ಬಿಜೆಪಿಗೆ ಹೋಗಲ್ಲ ಅಂದಿದ್ದರಂತೆ. ಬಿಜೆಪಿ ಟಿಕೆಟ್ ಸಿಗದೇ ಕಾಂಗ್ರೆಸ್ ಸೇರಿ ಅಥಣಿ ಕ್ಷೇತ್ರದಿಂದ ಶಾಸಕರಾಗಿಯೂ ಲಕ್ಷ್ಮಣ ಸವದಿ ಗೆದ್ದು ಬಂದರು. ಆದರೆ ಸವದಿಯವರು ಬಿಜೆಪಿಗೆ ವಾಪಸ್ ಬರ್ತಾರೆ ಎನ್ನುವ ಚರ್ಚೆ ಬೆನ್ನಲ್ಲೇ ಕನಕಪುರದ ಬಂಡೆ ಡಿ ಕೆ ಶಿವಕುಮಾರ್ ಅವರು ಸವದಿ ಜೊತೆಗೆ ಚರ್ಚೆ ನಡೆಸಿದ್ದಾರೆ.
ಕೈ ಬಿಡದಂತೆ ಲಕ್ಷ್ಮಣ್ ಸವದಿಗೆ ಡಿ ಕೆ ಶಿವಕುಮಾರ್ ಕೊಟ್ಟ ಬಿಗ್ ಆಫರ್ ಏನು?
1.ಲೋಕಸಭಾ ಚುನಾವಣೆ ಹಿನ್ನಲೆ ಶಾಸಕರಿಗೆ ಈಗಾಗಲೇ ನಿಗಮ ಮಂಡಳಿಯಲ್ಲಿ ಅವಕಾಶವನ್ನು ಕಲ್ಪಿಸಿದ್ದು, ನಿಗಮ ಮಂಡಳಿಯಲ್ಲಿ ನಿಮ್ಮ ಬೆಂಬಲಿಗರಿಗೆ ಅಥವಾ ನಿಮ್ಮ ಆಪ್ತರಿಗೆ ಸ್ಥಾನಮಾನ ಕಲ್ಪಸಿಕೊಡುವ ನಿಟ್ಟಿನಲ್ಲಿ ಆಫರ್ ನೀಡಿದ್ದಾರೆ.
2- ಉತ್ತರ ಕರ್ನಾಟಕದ ಎರಡು-ಮೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಜವಾಬ್ದಾರಿಯನ್ನು ನೀಡುವ ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
3-ಇನ್ನೂ ಲೋಕಸಭಾ ಚುನಾವಣೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ, ಲೋಕಸಭಾ ಚುನಾವಣೆಯ ಬಳಿಕ ನಿಮ್ಮನ್ನು ಮಂತ್ರಿ ಮಾಡ್ತೀವಿ ಎನ್ನುವ ಆಫರ್ ನೀಡಿದ್ದಾರೆ.
4- ನಿಮ್ಮ ಪುತ್ರನಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆ
5- ಲೋಕಸಭಾ ಚುನಾವಣೆ ಹೊತ್ತಲಿ ಬಿಜೆಪಿಯ ಪ್ರಮುಖರನ್ನೂ ಕಾಂಗ್ರೆಸ್ಗೆ ಕರೆತರಲು ಟಾಸ್ಕ್ ಕೊಟ್ಟಿದ್ದಾರೆ.