ಕೃಷಿ

ಕೃಷಿ ಕೆಲಸ ಮುಗಿಸಿ ಕೈಕಾಲು ತೊಳೆಯುವಾಗ ಹೊಂಡಕ್ಕೆ ಬಿದ್ದು ಉಪನ್ಯಾಸಕ ಸಾವು

Views: 95

ಕನ್ನಡ ಕರಾವಳಿ ಸುದ್ದಿ :ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು, ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯುವಾಗ ಕಾಲು ಜಾರಿ ಬಿದ್ದು ಉಪನ್ಯಾಸಕರೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಜಿಲ್ಲೆಯ ಚೇಳೂರು ತಾಲೂಕಿನ ವಂಗಿಮಳ್ಳು ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದೆ. ಗ್ರಾಮದ ಮೃತ ಶಂಕರರೆಡ್ಡಿ(48) ಉಪನ್ಯಾಸಕರಾಗಿದ್ದು, ಇದರ ಜೊತೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು.

ಮೃತ ಶಂಕರರೆಡ್ಡಿ ತಮ್ಮ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಜಮೀನು ಪಕ್ಕದ ಮಂಜುನಾಥ್ ರೆಡ್ಡಿಯವರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯಲು ಹೋಗಿದ್ದಾರೆ, ಈ ವೇಳೆ ಅಲ್ಲಿನ ಪಾಚಿಯಿಂದಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ.

ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದಾರೆ. ಕೃಷಿಹೊಂಡದ ಬಳಿ ಮೃತರ ಮೊಬೈಲ್, ಟವಲ್, ಚಪ್ಪಲಿ ಪತ್ತೆಯಾಗಿದೆ. ಕೃಷಿ ಹೊಂಡದ ಮೂಲೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

Related Articles

Back to top button