ಕರಾವಳಿ

ಕುಸಿದುಬಿದ್ದ ಬಾಲಕಿ ಆಸ್ಪತ್ರೆಯಲ್ಲಿ ಸಾವು 

Views: 90

ಬಂಟ್ವಾಳ, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತೌಹೀದ್ ಶಾಲಾ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ  ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್, ತಲಪಾಡಿಯ ಸಫೀರ್ ಅಹ್ಮದ್ ಎಂಬವರ ಮಗಳು ಆಯಿಷಾ ಶಹಿಮ (7) ಮೃತಪಟ್ಟ ವಿದ್ಯಾರ್ಥಿನಿ.

ಶಹಿಮಾ ಅವರು‌ ಮೂರು ವಾರಗಳ ಹಿಂದೆ ಮನೆಯಲ್ಲಿ ಕುಸಿದುಬಿದ್ದಿದ್ದರು. ತಕ್ಷಣ ಇವರನ್ನು ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಮೂರು ದಿನ ಕೋಮ ವ್ಯವಸ್ಥೆಯಲ್ಲಿದ್ದರು. ನಂತರ ಹೆಚ್ಚಿನ ಚಿಕಿತ್ಸೆ ನೀಡಿದ್ದರು.ಆಕೆ    ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

 

Related Articles

Back to top button