ಸಾಮಾಜಿಕ
ಕುದುರೆ ಏರಿ ಬಂದ ಮದುಮಗ..ಘೋರ ದುರಂತ..ಮದುವೆ ಮನೆಯಲ್ಲಿದ್ದ ಎಲ್ಲರೂ ಫುಲ್ ಶಾಕ್!

Views: 412
ಕನ್ನಡ ಕರಾವಳಿ ಸುದ್ದಿ: ಮದುವೆ ಮನೆಯಲ್ಲಿ ಮನಮಿಡಿಯುವ ಘೋರ ದುರಂತ ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ನಡೆದಿದೆ.
ಮದುಮಗ ಖುಷಿಯಾಗಿ ಕಲ್ಯಾಣ ಮಂಟಪಕ್ಕೆ ಕುದುರೆಯಲ್ಲಿ ಬರುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ವರ ಮದುವೆ ಮನೆಗೆ ಕುದುರೆಯಲ್ಲಿ ಆಗಮಿಸುತ್ತಿದ್ದಂತೆ ಹೃದಯಾಘಾತ
ಕುದುರೆ ಮೇಲೆ ಕೂತಿದ್ದ ಮದುಮಗ ಹಾಗೇ ಕುಸಿದು ಬಿದ್ದಿದ್ದು. ಮದುವೆ ಮನೆಯಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಕೂಡಲೇ ಮದುಮಗನ ರಕ್ಷಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹೃದಯಾಘಾತಕ್ಕೆ ಮದುಮಗ ಮೃತಪಟ್ಟಿರುವ ಕಡೇ ಕ್ಷಣದ ವಿಡಿಯೋ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಆಘಾತಕಾರಿ ವಿಡಿಯೋ ನೋಡುಗರ ಮನಕಲಕುವಂತೆ ಮಾಡಿದೆ.