ಜನಮನ

ಕುಂದಾಪುರ: ಮನೆಯಿಂದ ಹೊರಗಡೆ ಹೋದ ವ್ಯಕ್ತಿ ನಾಪತ್ತೆ 

Views: 234

ಕನ್ನಡ ಕರಾವಳಿ ಸುದ್ದಿ: ಮನೆಯಿಂದ ಹೊರಗಡೆ ಹೋದ ವ್ಯಕ್ತಿ ಮನೆಗೆ ವಾಪಸಾಗದೆ ನಾಪತ್ತೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕಾಣೆಯಾದ ವ್ಯಕ್ತಿ 24 ವರ್ಷದ ನಾಗೇಶ್  ಎಂಬುವವರಿಗೆ ಮಾನಸಿಕ ಕಾಯಿಲೆ ಇದ್ದು ಸದ್ರಿ ಯವರು ದಿನಾಂಕ 26-06-2025 ರಂದು ರಾತ್ರಿ 8:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ವ್ಯಕ್ತಿ ಕಪ್ಪು ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಬರ್ಮುಡ ಚಡ್ಡಿ ಧರಿಸಿರುತ್ತಾರೆ, 5’6 ಅಡಿ ಎತ್ತರ, ಗುಂಗುರು ತಲೆ ಕೂದಲು, ಗಡ್ಡ ಮೀಸೆ ಇರುತ್ತದೆ. ಈ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದಲ್ಲಿ ದಯವಿಟ್ಟು ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೋರಿಕೆ.

ಮೊಬೈಲ್ ಸಂಖ್ಯೆ 08254230338/ 9480805455 /8277988959

Related Articles

Back to top button