ಆರೋಗ್ಯ
ಕುಂದಾಪುರ: ಖ್ಯಾತ ದಂತ ವೈದ್ಯ ಡಾ.ಎನ್.ಪಿ. ಕಮಾಲ್ ನಿಧನ

Views: 149
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಹಳೆ ಬಸ್ ನಿಲ್ದಾಣದ ಹತ್ತಿರ ದಂತ ವೈದ್ಯ ಶಾಪ್ ಹೊಂದಿದ್ದ ಖ್ಯಾತ ಹಿರಿಯ ದಂತ ವೈದ್ಯ ಡಾ.ಎನ್.ಪಿ. ಕಮಾಲ್(92) ನಿಧನರಾದರು.
ಇವರು ಕುಂದಾಪುರ ರೋಟರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು, ಮಾಜಿ ಅಧ್ಯಕ್ಷ ಹಾಗೂ ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿ, ಖ್ಯಾತರಾಗಿದ್ದರು.
ಇವರು ಮೂಲತಹ ಕೇರಳದವರಾಗಿದ್ದು ಅನೇಕ ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದು ನೆಲೆಸಿದ್ದರು. ಅವರು 4 ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.