ಕುಂದಾಪುರ: ಕೋಟೇಶ್ವರದಲ್ಲಿ ವ್ಯಕ್ತಿಯೊಬ್ಬರಿಗೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ!
Views: 160
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸಮೀಪ ಕೋಟೇಶ್ವರ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಯುವಕನೋರ್ವ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.
ಪ್ರಸಾದ್ ಎಂಬವರಿಗೆ ಹಲ್ಲೆ ಮಾಡಿದ ಆರೋಪಿ ದೀಪಕ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಪಿರ್ಯಾದಿದಾರ ಪ್ರಸಾದ (32) ತಂದೆ ಚಂದ್ರ ಪೂಜಾರಿ ವಾಸ ಹಳೆ ಅಳಿವೆ ಕೋಟೇಶ್ವರ ಗ್ರಾಮ ಇವರು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು
ದಿನಾಂಕ ಜುಲೈ 22 ರಂದು ಸಂಜೆ ದೀಪಕ್ ಎಂಬುವನಿಗೆ ಕರೆ ಮಾಡಿ ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಿಯ ಎಂದು ಕೇಳಿದ್ದು ನಂತರ ಪಿರ್ಯಾದಿದಾರರು ದೀಪಕ್ ನಿಗೆ ನಿಮ್ಮ ಮನೆಯ ಹತ್ತಿರ ಬರುತ್ತೇನೆ ಕ್ಲಿಯರ ಆಗಿ ಹೇಳು ಎಂದು ಹೇಳಿ ರಾತ್ರಿ ಆತನ ಮನೆಯ ಬಳಿಗೆ ಹೋದಾಗ ರಾತ್ರಿ 8:30 ಗಂಟೆಗೆ ದೀಪಕನು ಮನೆಗೆ ಬಂದು ನೀನು ನಮ್ಮ ಮನಗೆ ಬಂದಿದ್ದು ಯಾಕೆ ಎಂದು ಹೇಳಿ ಬೈಕ್ ಮೇಲೆ ಇದ್ದ ಹೆಲ್ಮೆಟ್ ಹಿಡಿದುಕೊಂಡು ಬಂದು ಬಲಹಣೆಗೆ ಹೊಡೆದು ಇನ್ನು ಮುಂದಕ್ಕೆ ಮನೆಗೆ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






