ಸಾಮಾಜಿಕ

ಕುಂದಾಪುರ:ಪತಿ ಹಾಗೂ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು

Views: 256

ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಬ್ಬರು ಪತಿ ಹಾಗೂ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ.

ಕುಂದಾಪುರ ಕಸಬಾ ಗ್ರಾಮದ ಮೇಘನಾ ಅವರು ಕಂದಾವರ ಉಳ್ಳೂರಿನ ಪತಿ ಪ್ರಸನ್ನ, ಮಾವ ಮಹಾದೇವ, ಅತ್ತೆ ಲಲಿತಾ, ಅತ್ತಿಗೆ ಪ್ರಮೀಳಾ ವಿರುದ್ಧ ಪ್ರಕರಣ ದಾಖಲಾಗಿದೆ. ಕೇವಲ 3 ತಿಂಗಳ ಹಿಂದೆಯಷ್ಟೇ ಮೇಘನಾ ಅವರ ವಿವಾಹವಾಗಿದ್ದು, ವರದಕ್ಷಿಣೆಯಾಗಿ 20 ಲಕ್ಷ ರೂ. ಹಾಗೂ 12 ಪವನ್ ಚಿನ್ನಾಭರಣ ನೀಡಲಾಗಿತ್ತು. ಪತಿ ಅನುಚಿತ ಹಾಗೂ ಅನುಮಾನ ಬರುವಂತೆ ವರ್ತಿಸಿದ್ದು, ಪ್ರಶ್ನಿಸಿದ ಮೇಘನಾ ಹಾಗೂ ಅವರ ತಂದೆ-ತಾಯಿಗೆ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ. ಜೀವನ ಸರಿಪಡಿಸಲು ಇನ್ನು 5 ಲಕ್ಷ ರೂ. ವರದಕ್ಷಿಣೆ ನೀಡಬೇಕೆಂದು ಕೇಳಿದ್ದಾರೆ ಎಂದು ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button