ಕೃಷಿ

ಕುಂದಾಪುರ:ಕೊರ್ಗಿ ಹೆಸ್ಕತ್ತೂರಿನಲ್ಲಿ ನಾಟಿ ಕಾರ್ಯದಲ್ಲಿ ನಿರತ ಕೃಷಿಕ ಸಾವು

Views: 332

ಕನ್ನಡ ಕರಾವಳಿ ಸುದ್ದಿ: ನಾಟಿ ಕಾರ್ಯದಲ್ಲಿ ನಿರತ ಕೃಷಿಕರೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜುಲೈ 3ರಂದು ಕೊರ್ಗಿ ಹೆಸ್ಕತ್ತೂರಿನಲ್ಲಿ ಸಂಭವಿಸಿದೆ.

ಶ್ರೀನಿವಾಸ ಶೆಟ್ಟಿ (55) ಮೃತಪಟ್ಟವರು.ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಅವರು ನಾಟಿ ಕಾರ್ಯಕ್ಕಾಗಿ ಗದ್ದೆಯನ್ನು ಸಿದ್ದಪಡಿಸುತ್ತಿದ್ದರು. ಬೆಳಗ್ಗೆಯೇ ಮನೆಯಿಂದ ತೆರಳಿದವರು ಮಧ್ಯಾಹ್ನವಾದರೂ ಹಿಂದಿರುಗಿ ಬಾರದ ಕಾರಣ ಅವರ ಸಹೋದರ ನಂದಿ ಶೆಟ್ಟಿ ಗದ್ದೆಯ ಕಡೆಗೆ ಹೋಗಿ ನೋಡಿದಾಗ ನೀರಿಗೆ ಬಿದ್ದು ಮೃತಪಟ್ಟಿರುವುದು ಕಂಡುಬಂದಿತು.

ಕುಂದಾಪುರದ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಇನ್ನಿತರ ಅಧಿಕಾರಿಗಳು ಭೇಟಿ ನೀಡಿದರು.

Related Articles

Back to top button