ಕುಂದಾಪುರ:ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 3.0” ಕಾರ್ಯಕ್ರಮದ ಸಮಾರೋಪ

Views: 112
ಕುಂದಾಪುರ :ಡಾ ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಮಾರ್ಚ್ 26ರಂದು ನಡೆದ ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 3.0″ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪ್ರಾಕ್ತನಾ ವಿದ್ಯಾರ್ಥಿನಿ ಐಶ್ವರ್ಯ “ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯೆಯ ಜೊತೆಗೆ ಕೌಶಲ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ, ಅದಕ್ಕಾಗಿ ಈ ಕಾಲೇಜಿನಲ್ಲಿ ಬಹಳಷ್ಟು ಅವಕಾಶಗಳ ಆಗರವೇ ಇದೆ, ತಾವೆಲ್ಲರೂ ಕೂಡಾ ಅದರ ಸದುಪಯೋಗ ಪಡೆದುಕೊಂಡು ಯಶಸ್ವಿಯಾಗಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಉಮೇಶ್ ಶೆಟ್ಟಿಯವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ನೀಡಿ ಅಭಿನಂದಿಸಿದರು. ಉಪಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ , ವಿದ್ಯಾರ್ಥಿ ಪ್ರತಿನಿಧಿಗಳಾದ ಸುದೀಪ್,ರಶ್ಮಿತಾ ಉಪಸ್ಥಿತರಿದ್ದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸಿದ್ದ ಟೆಕ್ ಮಂಥನ್ 3.0 ಕಾರ್ಯಕ್ರಮದಲ್ಲಿ ದ್ವಿತೀಯ ಬಿಸಿಎ -ಎ ವಿಭಾಗವು ಸಮಗ್ರ ಪ್ರಶಸ್ತಿ ವಿಜೇತ ತಂಡವಾಗಿ ಆಯ್ಕೆಗೊಂಡಿತ್ತು.
ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ವಿಲ್ಲ್ಮಾ ಸ್ವಾಗತಿಸಿದರು, ಶ್ರೀ ಹರೀಶ್ ಕಾಂಚನ್ ವಿಜೇತರ ಪಟ್ಟಿ ವಾಚಿಸಿದರು. ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಜಯಲಕ್ಷ್ಮೀ ಸ್ವಾಗತಿಸಿದರು. ಶ್ರೀಕಾಂತ್ ವಂದಿಸಿದರು. ಶ್ರೀ ಪ್ರಣಮ್ ಕಾರ್ಯಕ್ರಮ ನಿರೂಪಿಸಿದರು.