ಕಿಮ್ಸ್ ಆಸ್ಪತ್ರೆಯಲ್ಲಿ ಔಷಧ ಕೊರತೆಯಿಂದ ಮಗು ಸಾವು

Views: 34
ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧ ಕೊರತೆಯಿಂದ ಪುಟ್ಟ ಮಗುವೊಂದು ಸಾವನ್ನಪ್ಪಿದ ದುರಂತ ಘಟನೆಯೊಂದು ನಡೆದಿದೆ.
ಹಳೇ ಹುಬ್ಬಳ್ಳಿಯ ಆನಂದ ನಗರದ ನಿವಾಸಿ ಬಶೀರ್ ಅಹ್ಮದ್ ಬಳ್ಳಾರಿ ಹಾಗೂ ನಿಕೃತ್ ಬಳ್ಳಾರಿ ದಂಪತಿ ಮಗು ಸಾವನ್ನಪ್ಪಿದೆ. ಮಗು ಸಾವಿಗೆ ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮಗು ಪಿಟ್ಸ್ ಬಂದು ಕಳೆದ 16 ದಿನಗಳಿಂದ ಕಿಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು, ಸೋಮವಾರ ಬೆಳಿಗ್ಗೆ ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದರಂತೆ. ಆದರೆ ರಾತ್ರಿ 9 ಗಂಟೆಗೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ತಿಳಿದಿದೆ. ಇದಕ್ಕೆ ಮುಖ್ಯ ಕಾರಣವೇ ಕಳೆದ ನಾಲ್ಕು ದಿನಗಳಿಂದ ಔಷಧಕ್ಕೆ ಆ ಮಗುವಿನ ಕುಟುಂಬಸ್ಥರು ಪರದಾಟ ನಡೆಸಿದ್ದರು. ಬೇಕಾದ ಔಷಧ ಕೇಳಲು ಹೋದಾಗ ನೋ ಸ್ಟಾಕ್ ಅಂತ ಔಷಧ ವಿಭಾಗದ ಸಿಬ್ಬಂದಿ ಬರೆದು ಕೊಡುತ್ತಿದ್ದರಂತೆ. ಐಸಿಯುನ ವೆಂಟಿಲೇಟರ್ ಮೇಲೆ ಇಟ್ಟು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೈ ಡೋಸ್ ನಿಂದ ಮಗು ಕೋಮಾಗೆ ಹೋಗಿತ್ತು ಎಂದು ಕುಟುಂಬಸ್ಥರ ಗಂಭೀರ ಆರೋಪ ಮಾಡಿದ್ದಾರೆ.