ಯುವಜನ

ಕಾರಿನಲ್ಲಿ ಲಾಕ್ ಆಗಿ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವು

Views: 351

ಕನ್ನಡ ಕರಾವಳಿ ಸುದ್ದಿ: ಆಟವಾಡುತ್ತಾ ಕಾರಿನೊಳಗೆ ಕುಳಿತ ನಾಲ್ವರು ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ ದ್ವಾರಪುಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಉದಯ್(8), ಚಾರುಮತಿ (8), ಚರಿಷ್ಮಾ (6) ಮತ್ತು ಮನಸ್ವಿ (6) ಎನ್ನಲಾಗಿದ್ದು, ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರಾಗಿದ್ದಾರೆ, ಉಳಿದ ಇಬ್ಬರು ಅವರ ಸ್ನೇಹಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಬೇಸಿಗೆ ರಜೆಯ ಖುಷಿಯಲ್ಲಿದ್ದ ದ್ವಾರಪುಡಿ ಗ್ರಾಮದ ನಾಲ್ಕು ಮಕ್ಕಳು ಭಾನುವಾರ ಬೆಳಿಗ್ಗೆ ಆಟವಾಡಲು ಕಾರಿನೊಳಗೆ ಹೋಗಿದ್ದಾರೆ. ಸಲ್ಪ ಸಮಯದಲ್ಲಿಯೇ ಸೆಂಟ್ರಲ್ ಲಾಕ್ ಆಗಿದ್ದು ಈ ವಿಚಾರ ಮಕ್ಕಳಿಗೆ ಗೊತ್ತೇ ಇಲ್ಲ. ಇದಾದ ಕೆಲ ಹೊತ್ತಿನ ಬಳಿಕ ಮಕ್ಕಳು ಉಸಿರಾಟದ ಸಮಸ್ಯೆಗೆ ಒಳಗಾಗಿ ಅಸ್ವಸ್ಥಗೊಂಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಜೀವ ಸಹ ಹೋಗಿದೆ.

ಇನ್ನು ಪೋಷಕರು ಮೂರುಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಮಕ್ಕಳು ಪತ್ತೆಯಾಗಿಲ್ಲ. ಅಂತಿಮವಾಗಿ ಕಾರಿನ ಬಳಿ ಹೋದಾಗ ಮಕ್ಕಳು ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಗಮನನಿಸಿದ್ದಾರೆ

ಉಸಿರಾಡಲು ಸಾಧ್ಯವಾಗದೆ ಮಕ್ಕಳು ಪ್ರಾಣಬಿಟ್ಟಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳೀಯ ಪೊಲೀಸರು ಕಾರಿನ ಮಾಲೀಕರಿಗಾಗಿ ಹುಡುಕಾಟ ನಡೆಸಿದ್ದಾರೆ.

Related Articles

Back to top button