ಉಚಿತ ಪ್ರಯಾಣದಲ್ಲಿ ಅವಳಲ್ಲ… ಅವನು!?

Views: 1
ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ವೇಷ ಮರೆಸಿಕೊಂಡು ಸಿಕ್ಕಿ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.
ರಾಜ್ಯಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಪ್ರಯೋಜನವನ್ನು ಲಕ್ಷಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಉಚಿತ ಪ್ರಯಾಣದ ದುರ್ಬಳಕೆ ಎಂಬಂತೆ ಪುರುಷನೊಬ್ಬ ಬುರ್ಖಾ ಧರಿಸಿ ಉಚಿತವಾಗಿ ಪ್ರಯಾಣಿಸಲು ಯತ್ನಿಸಿದಾಗ ಗುರುವಾರ ಬಸ್ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ.
ದಾರವಾಡದ ಸಂಶಿ ಬಸ್ ನಿಲ್ದಾಣದ ಬಳಿ ಬುರ್ಖಾ ತೊಟ್ಟು ಕುಳಿತಿದ್ದ ವ್ಯಕ್ತಿ ಬಗ್ಗೆ ಸಂಶಯ ಉಂಟಾಗಿ ಮುಖ ತೋರಿಸುವಂತೆ ಕೇಳಿದ್ದಾರೆ. ಬುರ್ಖಾ ತೆಗೆಯಲು ಒಪ್ಪದಿದ್ದಾಗ ನೆರೆದಿದ್ದವರ ಒತ್ತಾಯದ ಮೇರೆಗೆ ಬುರ್ಖಾ ತೆಗೆದಾಗ ಬುರ್ಖಾದಲ್ಲಿದ್ದು ಅವಳಲ್ಲ.. ಅವನು ಎಂದು ಗೊತ್ತಾಗಿದೆ.
ಬುರ್ಖಾಧಾರಿ ವ್ಯಕ್ತಿ ಬೆಂಗಳೂರಿನ ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಈತ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿಯ ನಿವಾಸಿ ವೀರಭದ್ರಯ್ಯ ನಿಂಗಪ್ಪ ಎಂದು ತಿಳಿಯಲಾಗಿದೆ.ಆತನ ಬಳಿಯಲ್ಲಿದ್ದ ಆಧಾರ್ ಕಾರ್ಡ್ ಮೂಲಕ ಪತ್ತೆಹಚ್ಚಲಾಗಿದೆ.
.ಆತನ ಬಳಿ ಮಹಿಳೆಯ ಆಧಾರ್ ಕಾರ್ಡ್ ಜೆರಾಕ್ಸ್ ಸಹ ಪತ್ತೆಯಾಗಿತ್ತು. ನಾನು ಭಿಕ್ಷಾಟನೆಗಾಗಿ ಈ ರೀತಿ ವೇಷ ತೊಟ್ಟಿರುವುದಾಗಿ ವೀರಭದ್ರ ಹೇಳಿಕೊಂಡಿದ್ದಾನೆ. ಕುಂದಗೋಳ ಪೊಲೀಸರು ಬುರ್ಖಾಧಾರಿ ಪುರುಷನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.