ಇತರೆ

ಕೋಟ: ಯೂಟ್ಯೂಬ್ ಡಿಜಿಟಲ್ ಚಾನೆಲ್‌ ವರದಿಗೆ ಜೀವ ಬೆದರಿಕೆ

Views: 49

ಕನ್ನಡ ಕರಾವಳಿ ಸುದ್ದಿ:  ಯೂಟ್ಯೂಬ್ ಡಿಜಿಟಲ್ ಮಾಧ್ಯಮದಲ್ಲಿ ವರದಿಯೊಂದನ್ನು ಪ್ರಕಟ ಮಾಡಿದಕ್ಕಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು ವಡ್ಡರ್ಸೆಯ ಕುಂಬಾರಬೆಟ್ಟು ನಿವಾಸಿ ಪ್ರಣುತ್ ಕುಮಾರ್ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಣುತ್‌ ಗಾಣಿಗ ಈತನ ಮನೆ ಹತ್ತಿರ ಇರುವ 1 ಎಕ್ರೆ ಸರ್ಕಾರಿ ಜಾಗ ಆರೋಪಿತ ಒತ್ತುವರಿ ಮಾಡಿ ಶೆಡ್‌ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಸದ್ರಿ ಸ್ಥಳಕ್ಕೆ ಹೋಗಿ ರಸ್ತೆಯಲ್ಲಿ ನಿಂತು GPS ಪೋಟೋ ತೆಗೆದು ವರದಿ ಮಾಡುತ್ತಿದ್ದ ಸಂಧರ್ಭದಲ್ಲಿ  ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿರುತ್ತಾರೆ.

ಇವರು ಡಿಜಿಟಲ್ಸ್ ಚಾನೆಲ್‌ವೊಂದರಲ್ಲಿ ಮಾಡಿದ ವರದಿಗೆ ಆಕ್ಷೇಪ ವ್ಯಕ್ತಪಡಿಸಿ” ವಡ್ಡರ್ಸೆ ಯಾಳಕ್ಲು ನಿವಾಸಿ ಅಜಿತ್ ಕುಮಾ‌ರ್ ಶೆಟ್ಟಿ ಎನ್ನುವಾತ ಚಂದ್ರ ಶೆಟ್ಟಿ ಹಾಗೂ ಅಪರಿಚಿತ ಮಹಿಳೆಯೊಬ್ಬಳ ಜತೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪ್ರನುತ್ ಅವರ ದೊಡ್ಡಮ್ಮ ಪ್ರೇಮಾ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗೂ ಗಲಾಟೆ ಕೇಳಿ ಮನೆಯಿಂದ ಹೊರಬಂದ ಪ್ರನುತ್‌ಗೆ ವರದಿ ಡಿಲೀಟ್ ಮಾಡಬೇಕು ಒದುವೇಳೆ ಡಿಲೀಟ್‌ ಮಾಡದಿದ್ದಲ್ಲಿ ಕೋಟಾದಲ್ಲಿರುವ ನಿಮ್ಮ ಸ್ಟುಡಿಯೋಗೆ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

Related Articles

Back to top button
error: Content is protected !!