ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ “ಅಂತರ್ ಜಿಲ್ಲಾ ಭಜನಾ ಕಮ್ಮಟ” ಪೂರ್ವಭಾವಿ ಸಭೆ

Views: 56
ಕನ್ನಡ ಕರಾವಳಿ ಸುದ್ದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ದಿನಾಂಕ 17.05.2025 ಶನಿವಾರ ದಂದು “ಅಂತರ್ ಜಿಲ್ಲಾ ಭಜನಾ ಕಮ್ಮಟ” ನಡೆಯಲಿದೆ.
ಮಾರ್ಚ್ 09 ರಂದು ರವಿವಾರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಆಡಳಿತ ಧರ್ಮದರ್ಶಿ ಕೆ.ಶ್ರೀ ರಮಣ ಉಪಾಧ್ಯಾಯರು ವಹಿಸಿದ್ದರು.
ಸಭೆಯಲ್ಲಿ ಗೌರವ ಉಪಾಧ್ಯಕ್ಷರಾದ ಬಿ.ಜಿ.ಸೀತಾರಾಮ ಧನ್ಯ, ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಕುಂದಾಪುರ ತಾಲೂಕಿನ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿಗಾರ್, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶೆಟ್ಟಿ, ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಅರುಣ್ ಕುಂದರ್, ಕಾರ್ಯದರ್ಶಿ ಪ್ರಕಾಶ್ ಕುಲಾಲ್, ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ 50 ಭಜನಾ ತಂಡಗಳು ಈ ಕಮ್ಮಟದಲ್ಲಿ ಭಾಗವಹಿಸುವ ಮಾಹಿತಿ ಇದ್ದು, ಈ ಕಮ್ಮಟವನ್ನು ಯಶಸ್ವಿಯಾಗಿ ನಿರ್ವಹಿಸಲು ಸಮರ್ಪಕ ರೂಪುರೇಷಗಳ ಬಗ್ಗೆ ಪ್ರಾಸ್ತಾವಿಕವಾಗಿ ಚರ್ಚಿಸಲಾಯಿತು.