ಇತರೆ

ಆಟೋ- ಟ್ರಕ್ ನಡುವೆ ಭೀಕರ ಅಪಘಾತ 12 ಮಂದಿ ಸಾವು 

Views: 41

ಉತ್ತರ ಪ್ರದೇಶ: ಟ್ರಕ್​ವೊಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಶಹಾಜ್ಹಾನ್​ಪುರ್​ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ. ಅಲ್ಲಿನ ಫರೂಖಬಾದ್​ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ಮಂಜು ಮುಸುಕಿದ್ದ ಕಾರಣ ಈ ಅಪಘಾತ ನಡೆದಿದೆ ಎಂದು ಅಲ್ಲಾಗ್​ಗಂಜ್​ ಪೊಲೀಸರು ತಿಳಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ದು:ಖ ವ್ಯಕ್ತಪಡಿಸಿದ್ದಾರೆ.

ಇನ್ನು ಸಾವನ್ನಪ್ಪಿದ 12 ಮಂದಿಯ ಮನೆಯವರಿಗೆ ಸಿಎಂ ಯೋಗಿ ಸಾಂತ್ವನ ಹೇಳಿದ್ದಾರೆ. ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಎಲ್ಲ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.

Related Articles

Back to top button