ಇತರೆ
ಈಜಲು ತೆರಳಿದ ಇಬ್ಬರು ಬಾಲಕರು ನೀರು ಪಾಲು

Views: 153
ಕನ್ನಡ ಕರಾವಳಿ ಸುದ್ದಿ: ಭಾನುವಾರ ಶಾಲೆ ಇಲ್ಲದ ಕಾರಣ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಜೀವ ಬಿಟ್ಟಿದ್ದಾರೆ. ಈ ಘಟನೆಯು ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಶಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೊಪ್ಪರಶಿಕೊಪ್ಪ ಗ್ರಾಮದ ನಿಖಿಲ ನಾಗೋಜಿ (11), ಧನುಷ್ ಚೊಳಪ್ಪನವರ್ (13) ಪ್ರಾಣ ಕಳೆದುಕೊಂಡ ಬಾಲಕರು. ನಿತ್ಯ ಶಾಲೆಗೆ ಹೋಗುತ್ತಿದ್ದ ಈ ಇಬ್ಬರು ಬಾಲಕರು ಭಾನುವಾರ ಆಗಿದ್ದರಿಂದ ಇಂದು ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ಕೆರೆ ಬಳಿಗೆ ಹೋಗಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ಬಾಲಕರು ಈಜಲೆಂದು ಕೆರೆಗೆ ಇಳಿದಿದ್ದಾರೆ.
ಆದರೆ ಕೆರೆಯ ನೀರಲ್ಲಿ ಈಜಲು ಬಾರದೇ ಬಾಲಕರು ಮುಳುಗಿ ಜೀವ ಬಿಟ್ಟಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಜನರು ಓಡೋಡಿ ಕರೆ ಬಳಿಗೆ ಬಂದಿದ್ದಾರೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.