ಧಾರ್ಮಿಕ

ಅಗಸ್ಟ್ 16 : ಮರವಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ

Views: 2

ಕುಂದಾಪುರ :ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಅಗಸ್ಟ್ 16ರಂದು ಕರ್ಕಾಟಕ ಅಮಾವಾಸ್ಯೆ ಜಾತ್ರೆ ನಡೆಯಲಿದೆ.

ದಶ ಅವತಾರದಗಳಲ್ಲಿ ಒಂದಾಗ ವರಾಹ ವಿಷ್ಣು ನರಸಿಂಹ ಸ್ವರೂಪದಲ್ಲಿರುವ  ಮರವಂತೆ, ಇಲ್ಲಿಗೆ ಅಮಾವಾಸ್ಯೆ ಎಂದು ಸಹಸ್ರಾರು ಜನರು ಭಕ್ತರು, ಮದುವೆಯಾದ ಹೊಸ ಜೋಡಿಗಳು ಇಲ್ಲಿಗೆ ಆಗಮಿಸಿ, ಸಮುದ್ರ ಹಾಗೂ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ಯಾವುದೇ ರೋಗ ರುಜಿನಾದಿಗಳನ್ನು ದೇವರು ಪರಿಹರಿಸುತ್ತಾನೆ. ಪ್ರಕೃತಿ ವಿಕೋಪವನ್ನು ಸಹ ತಡೆಯುವ ಶಕ್ತಿ ಶ್ರೀದೇವರದು ಎನ್ನುವ ನಂಬಿಕೆಯಿಂದ ಮತ್ತು ಮಸ್ತ್ಯ ಸಂಪತ್ತು ಮೀನುಗಾರರ ಸುರಕ್ಷತೆಗೆ, ಸಮೃದ್ಧಿಗಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವ ಕ್ಷೇತ್ರ ಇದಾಗಿದೆ.

ಜುಲೈ 17ರಂದು ಕರ್ಕಾಟಕ ಅಮಾವಾಸ್ಯೆ ಎಂದು ತಪ್ಪಾಗಿ ಮುದ್ರಣಗೊಂಡಿದ್ದು ,ಆದರೆ ಮರವಂತೆಯಲ್ಲಿ ಈ ವರ್ಷ ಆಗಸ್ಟ್ 16 ರಂದು ಜಾತ್ರೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಷ ಸತೀಶ್ ಎಂ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button