ರಾಜಕೀಯ
NDA ಮೈತ್ರಿ ಕೂಟಕ್ಕೆ ಬಿಹಾರದಲ್ಲಿ ಅಭೂತಪೂರ್ವ ಗೆಲುವು; ಆರ್.ಜೆ.ಡಿ-ಕಾಂಗ್ರೆಸ್ ಮೈತ್ರಿಗೆ ಮುಖಭಂಗ
Views: 44
ಕನ್ನಡ ಕರಾವಳಿ ಸುದ್ದಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಎನ್ ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಮಹಾಘಟಬಂಧನ್ ಸೋಲನುಭವಿಸಿದೆ. ಅದರಲ್ಲಿಯೂ ಕಾಂಗ್ರೆಸ್ ಹಾಗೂ ಆರ್ ಜೆಡಿ ಮೈತ್ರಿ ಪಕ್ಷಗಳು ತೀವ್ರ ಮುಖಭಂಗ ಅನುಭವಿಸಿವೆ.

243 ಸಂಖ್ಯಾಬಲದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ 202, ಮಹಾಘಟಬಂಧನ್ 35, ಜೆ ಎಸ್ ಪಿ- 0, ಇತರೆ 6 ಸ್ಥಾನಗಳನ್ನು ಪಡೆದುಕೊಂಡಿವೆ.
ಬಿಜೆಪಿ 92 ಹಾಗೂ ಜೆಡಿಯು 84, ಎಲ್ ಜೆ ಪಿ 20, ಇತರೆ 6, ಆರ್ ಜೆಡಿ 23, ಕಾಂಗ್ರೆಸ್ 6, ಸಿಪಿಐ ಎಂ- 0, ಸಿಪಿಐ ಎಂ ಎಲ್ ಎಲ್ 3 ಸ್ಥಾನಗಳಲ್ಲಿ ಗೆಲುವು ಪಡೆದಿವೆ.






