ಯುವಜನ

HALನಲ್ಲಿದೆ ಉದ್ಯೋಗಾವಕಾಶ; 51 ಹುದ್ದೆಗಳಿಗೆ ನೇಮಕಾತಿ

Views: 245

ಬೆಂಗಳೂರು:  ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಡೆಟ್ನಲ್ಲಿ(ಹೆಚ್‌ಎಎಲ್‌) ಖಾಲಿ ಇರುವ ಡಿಪ್ಲೊಮಾ ಟೆಕ್ನಿಷಿಯನ್ ಮತ್ತು ಆಪರೇಟರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ನಾಲ್ಕು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಎಚ್ಎಎಲ್ನಲ್ಲಿರುವ ಒಟ್ಟು 51 ಹುದ್ದೆಗಳ ಭರ್ತಿಗೆ ಕ್ರಮ

ಡಿಪ್ಲೊಮೊ ಟೆಕ್ನಿಷಿಯನ್- 47

ಆಪರೇಟರ್ಸ್ – 3

ಅಸಿಸ್ಟಂಟ್ – 1

ವಿದ್ಯಾರ್ಹತೆ: ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು. ಆಪರೇಟರ್ ಹುದ್ದೆಗೆ ಐಟಿಐ ಪದವಿ ಹೊಂದಿರಬೇಕು. ಅಸಿಸ್ಟಂಟ್ ಹುದ್ದೆಗೆ ಬಿಎ, ಬಿಎಸ್ಸಿ ಅಥವಾ ಬಿ.ಕಾಂ ಪದವಿ ಹೊಂದಿರಬೇಕು.

ವೇತನ: ಡಿಪ್ಲೊಮೊ ಟೆಕ್ನಿಷಿಯನ್ ಗಳಿಗೆ 48,511 ರೂ ಹಾಗೂ ಆಪರೇಟರ್ಸ್, ಅಸಿಸ್ಟಂಟ್ಗಳಿಗೆ ಮಾಸಿಕ 46,554 ರೂ ನಿಗದಿಸಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 28. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಜೂನ್ 12 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 26.

ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hal-india.co.in ಭೇಟಿ ನೀಡಿ.

Related Articles

Back to top button
error: Content is protected !!