ಜನಮನ

BHEL ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 

Views: 157

ಕನ್ನಡ ಕರಾವಳಿ ಸುದ್ದಿ:ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಹೆಚ್ಇಎಲ್) ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿತ್ತು. ಈ ಕೆಲಸಗಳಿಗೆ ಡಿಸೆಂಬರ್ 09 ಅಂದರೆ ನಾಳೆಯೇ ಕೊನೆಯ ದಿನವಾಗಿದ್ದರಿಂದ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅಪ್ಲೇ ಮಾಡಬಹುದು. ಏಕೆಂದರೆ ಕೊನೆಯ ದಿನಾಂಕವಾದ ಮೇಲೆ ಯೋಚಿಸಿದರೆ ಏನು ಉಪಯೋಗ ಇರುವುದಿಲ್ಲ.

ಇಷ್ಟ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಕೆಲಸಗಳಿಗೆ ಅಪ್ಲೇ ಮಾಡಬಹುದು. ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರಿಗೆ ಇಲ್ಲಿ ಅವಕಾಶ ಇದೆ. ಬಿಹೆಚ್ಇಎಲ್ ಸಂಸ್ಥೆಯ FTA ಗ್ರೇಡ್ II (AUSC) ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಇನ್ನು ಈ ಹುದ್ದೆಗಳಿಗೆ ಬೇಕಾದ ವೇತನ ಶ್ರೇಣಿ, ಹುದ್ದೆಯ ಸ್ಥಳ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ. ಇನ್ನು ಈ ಕೆಲಸಗಳಿಗೆ ಪರೀಕ್ಷೆ ಇರಲ್ಲ. ಇಂಟರ್ವ್ಯೂವ್ ಮೂಲಕ ನೇಮಕಾತಿ ಇರುತ್ತದೆ.

ವೇತನ ಶ್ರೇಣಿ- 84,000 ರೂಪಾಯಿಗಳು

ಯಾವುದೇ ಪರೀಕ್ಷೆ, ಟೆಸ್ಟ್ ಇರಲ್ಲ

ಇಂಟರ್ವ್ಯೂವ್ ಮೂಲಕ ಆಯ್ಕೆ

ಅರ್ಜಿ ಶುಲ್ಕ- ಇರುವುದಿಲ್ಲ

ವಿದ್ಯಾರ್ಹತೆ-

ಬಿಇ/ ಬಿಟೆಕ್/ ಬಿಎಸ್ಸಿ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಕನಿಷ್ಠ 2 ವರ್ಷ ಕೆಲಸದ ಅನುಭವ ಇರಬೇಕು.

ವಯಸ್ಸಿನ ಮಿತಿ

18 ವರ್ಷದಿಂದ 34 ವರ್ಷಗಳು

ಉದ್ಯೋಗದ ಹೆಸರು– FTA Grade-II (AUSC)

ಒಟ್ಟು ಹುದ್ದೆಗಳು= 05

ಅರ್ಜಿ ಸಲ್ಲಿಸುವುದು ಹೇಗೆ..?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ recruitment ಎನ್ನುವುದನ್ನು ಕ್ಲಿಕ್ ಮಾಡಿ BHEL ಉದ್ಯೋಗಗಳ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ. ಹಾಗೇ ಕೆಳಗೆ ಸ್ಕ್ರಾಲ್ ಮಾಡಿ, ಉದ್ಯೋಗಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ಕಿಸಿ. ಯಾವುದೇ ತಪ್ಪುಗಳಿಲ್ಲದೆ ಅರ್ಜಿಯನ್ನ ಪೂರ್ಣವಾಗಿ ಭರ್ತಿ ಮಾಡಿ ಸಬ್ಮೀಟ್ ಮಾಡಿ.

ಅನ್ಲೈನ್ ಅಪ್ಲೇ ಲಿಂಕ್-

https://hwr.bhel.com/recruitment/FtaEngg/index.jsp

ಅರ್ಜಿಗೆ ಕೊನೆ ದಿನಾಂಕ- 09 ಡಿಸೆಂಬರ್ 2024

Related Articles

Back to top button