ಜನಮನ

ಅತ್ಯಾಚಾರ: ಬಾಲಕಿ ಒಪ್ಪದಿದ್ದರೆ ವೈದ್ಯಕೀಯ ಪರೀಕ್ಷೆಗೆ ಒತ್ತಾಯ ಸಲ್ಲ; ದೆಹಲಿ ಹೈಕೋರ್ಟ್ 

Views: 37

ಕನ್ನಡ ಕರಾವಳಿ ಸುದ್ದಿ: ಅತ್ಯಾಚಾರ ಸಂತ್ರಸ್ತ ಬಾಲಕಿಯು ವೈದ್ಯಕೀಯ ಪರೀಕ್ಷೆಗೆ ಒಪ್ಪದೇ ಇದ್ದರೆ, ಆಕೆಯನ್ನು ಒತ್ತಾಯಿಸಲು ಪೊಲೀಸರಿಗೆ ಅಧಿಕಾರ ಇಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ

ಆರೋಪಿ ಉತ್ತರ ಪ್ರದೇಶದಲ್ಲಿ ನೆಲೆಸಿದ್ದು, 11 ವರ್ಷದ ಮಲಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಎದುರಿಸುತ್ತಿದ್ದು, ಸದ್ಯ ಬಂಧನದಲ್ಲಿದ್ದಾನೆ. ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೇ, ಬಾಲಕಿ 11 ವರ್ಷದವಳಲ್ಲ, ಹೆಚ್ಚು ವಯಸ್ಸಿನವಳು. ಬೇಕಿದ್ದರೆ ವೈದ್ಯಕೀಯ ಪರೀಕ್ಷೆ ನಡೆಸಿ ಎಂದೂ ವಾದಿಸಿದ್ದ.

ಈ ಅಂಶಗಳ ಮೇಲೆಯೇ ಆತ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ, ಬಾಲಕಿ ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದಳು. ಆರೋಪಿ ಪರ ವಕೀಲರು, ಬಾಲಕಿಯ ತಾಯಿ ವೈದ್ಯ ಪರೀಕ್ಷೆಗೆ ಒಪ್ಪಿಗೆ ನೀಡಿದ್ದರೂ, ಬಾಲಕಿ ನಿರಾಕರಿಸಿದ್ದಾಳೆ. ಇದೇ ಕಾರಣದ ಮೇಲೆ ತಮ್ಮ ಕಕ್ಷಿದಾರನಿಗೆ ಜಾಮೀನು ನೀಡಬೇಕು ಎಂದು ವಾದಿಸಿದ್ದರು.

ಆದರೆ, ಈ ವಾದವನ್ನು ಪೂರ್ಣ ತಿರಸ್ಕರಿಸಿದ ನ್ಯಾಯಮೂರ್ತಿ ಗಿರೀಶ್ ಕಠಾಲಿಯ ಅವರು, ಬಾಲಕಿಯ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆ ಗೌರವಿಸ ಬೇಕಿದೆ ಎಂದು ಅಭಿಪ್ರಾಯಪಟ್ಟರು. ಅತ್ಯಾಚಾರದಿಂದ ಈಗಾಗಲೇ ನೊಂದಿ ರುವ ಬಾಲಕಿಯ ಗಾಯದ ಮೇಲೆ ಮತ್ತಷ್ಟು ನೋವು ಸೇರಿಸುವ ಅಧಿಕಾರ ಪೊಲೀಸರಿಗಿಲ್ಲ ಎಂದು ಹೇಳಿ, ಆರೋ ಪಿಯ ಜಾಮೀನು ಅರ್ಜಿ ತಿರಸ್ಕರಿಸಿದರು.

Related Articles

Back to top button
error: Content is protected !!