BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು, ನೇರ ಸಂದರ್ಶನದಿಂದ ಆಯ್ಕೆ!

Views: 171
BEL ಸಂಸ್ಥೆಯಲ್ಲಿ ಖಾಲಿ ಇರುವಂತಹ ಪ್ರಾಜೆಕ್ಟ್ ಇಂಜಿನಿಯರಿಂಗ್-1 ಹುದ್ದೆಗಳನ್ನು ಭರ್ತಿ ಮಾಡಲು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಅರ್ಜಿಗಳನ್ನು ಆಹ್ವಾನ ಮಾಡಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸಲು ಲಿಖಿತ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತದೆ. ಬಳಿಕ ಸಂಸ್ಥೆಯ ಕಮಿಟಿಯು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಅಭ್ಯರ್ಥಿಗಳು ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಸ್ಥಳಕ್ಕೆ ಹಾಜರಾಗಬೇಕು
ಎಲ್ಲೆಲ್ಲಿ.. ಎಷ್ಟೆಷ್ಟು ಹುದ್ದೆಗಳು
ಪ್ರಾಜೆಕ್ಟ್ ಇಂಜಿನಿಯರ್-1
ಒಟ್ಟು ಹುದ್ದೆಗಳು- 13
32 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ವಿದ್ಯಾರ್ಹತೆ..4 ವರ್ಷದ ಬಿಇ ಅಥವಾ ಬಿಟೆಕ್ ಅನ್ನು ಪೂರ್ಣಗೊಳಿಸಿರಬೇಕು.
ಎಲೆಕ್ಟ್ರಾನಿಕ್ಸ್- ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಆ್ಯಂಡ ಕಮ್ಯೂನಿಕೇಶನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯೂನಿಕೇಶನ್/ ಟೆಲಿಕಮ್ಯೂನಿಕೇಶನ್/ ಕಮ್ಯೂನಿಕೇಶನ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್.
ಕಂಪ್ಯೂಟರ್ ಸೈನ್ಸ್- ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮನೇಶನ್ ಟೆಕ್ನಾಲಜಿ/ ಇನ್ಫಾರ್ಮನೇಶನ್ ಸೈನ್ಸ್.
BEL ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ..?
ವಾಕ್-ಇನ್-ಇಂಟರ್ವ್ಯೂವ್ ಮೂಲಕ ಆಯ್ಕೆ
ಇಂಟರ್ವ್ಯೂವ್ ನಡೆಯುವ ಸ್ಥಳ..?
28-08-2024 ಜೋಧ್ಪುರ, ರಾಜಸ್ಥಾನ
05-09-2024 ಜಾಮನಗರ, ಗುಜರಾತ್
ಅರ್ಜಿ ಎಷ್ಟು ಶುಲ್ಕ ಪಾವತಿಮಾಡಬೇಕು..?
ಅರ್ಜಿ ಹಾಕಲು ಅಭ್ಯರ್ಥಿಗಳು 472 ರೂ.ಗಳನ್ನು ಪಾವತಿ ಮಾಡಬೇಕು.
ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಸಂಬಳ: ಪ್ರಾಜೆಕ್ಟ್ ಇಂಜಿನಿಯರಿಂಗ್-1 ಹುದ್ದೆಗೆ ಆಯ್ಕೆ ಆಗುವಂತ ಅಭ್ಯರ್ಥಿಗೆ ಪ್ರತಿ ತಿಂಗಳು 40,000 ರೂ.ಗಳನ್ನು ನೀಡಲಾಗುವುದು. 2ನೇ ವರ್ಷಕ್ಕೆ 45 ಸಾವಿರ ರೂ.ಗಳು. 3ನೇ ವರ್ಷಕ್ಕೆ 50 ರೂ.ಗಳನ್ನು ನೀಡುತ್ತದೆ. ಹೀಗೆ ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಿಕೊಂಡು ಹೋಗಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ..?
ಅಭ್ಯರ್ಥಿಗಳು ಡಿಜಿಟಲ್ ಸಹಿನ್ ಇರುವ 2 ಫೋಟೋ ಜೊತೆ ಎಲ್ಲ ಮೂಲ ದಾಖಲೆಗಳೊಂದಿಗೆ ಆಯ್ಕೆ ವಿಧಾನಕ್ಕೆ ನೇರವಾಗಿ ಹಾಜರಾಗಬಹುದು. ಇದಕ್ಕೂ ಮೊದಲು ಅಭ್ಯರ್ಥಿಗಳು ತಮ್ಮ ಸ್ವ-ವಿವರ ಹಾಗೂ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂಸ್ಥೆಗೆ ಇ-ಮೇಲ್ ಮಾಡಬೇಕು. ಇ-ಮೇಲ್- pkhrrect@bel.co.in
ಸಂಪೂರ್ಣ ಮಾಹಿತಿ ಬೇಕಾದರೆ ಈ ಲಿಂಕ್ ಕ್ಲಿಕ್ ಮಾಡಿ- https://studycafe.in/wp-content/uploads/2024/08/BEL-Recruitment-2024-5.pdf