50,000 ಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವವರಿಗೆ ಬ್ಯಾಂಕ್ ನಲ್ಲಿ ಹೊಸ ನಿಯಮ

Views: 50
ಬ್ಯಾಂಕ್ ವ್ಯವಹಾರಗಳು ಹಿಂದಿಗಿಂತಲೂ ಬಹಳ ಸುಲಭವಾಗಿದೆ, ನಾವು ಎಲ್ಲಾ ವ್ಯವಹಾರಗಳನ್ನು ಡಿಜಿಟಲ್ ಮುಖಾಂತರ ಮಾಡಿ ಮುಗಿಸುತ್ತೇವೆ. ವಿದೇಶಿ ವಹಿವಾಟು ಕೂಡ ಬಹಳ ಸುಲಭವಾಗಿದ್ದು ಕ್ಷಣ ಮಾತ್ರದಲ್ಲಿ ವಿದೇಶಿ ಹಣಕಾಸು ವ್ಯವಹಾರವನ್ನು ಮಾಡಬಹುದು
ಆದರೆ ಹೀಗೆ ಹಣಕಾಸು ವ್ಯವಹಾರ ಮಾಡುವಾಗ ಅಕ್ರಮ ವ್ಯವಹಾರಗಳು ಹೆಚ್ಚಾಗಿ ಕಂಡುಬರುತ್ತದೆ, ಈಗ ಹೊಸ ರೂಲ್ಸ್ ಜಾರಿಯಾಗಿದ್ದು ಅಂತರಾಷ್ಟ್ರೀಯ ಹಣ ವಹಿವಾಟು ಮಾಡುವವರು ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕು.
ಅಂತರಾಷ್ಟ್ರೀಯ ಹಣಕಾಸು ವಹಿವಾಟಿನ ಮಿತಿ ಮೀರಿದರೆ ?
ಅಂತರಾಷ್ಟ್ರೀಯ ಹಣಕಾಸು ವಹಿವಾಟು ಐವತ್ತು ಸಾವಿರ ರೂಪಾಯಿಗಳನ್ನು ಮೀರಿದರೆ ಅದಕ್ಕೆ ದಾಖಲೆಗಳನ್ನು ಕೊಡಬೇಕು. ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಹಣ ವರ್ಗಾವಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, 50,000 ಮೀರಿದ ಅಂತರಾಷ್ಟ್ರೀಯ ವಹಿವಾಟಿನ ಮೇಲೆ ಕೇಂದ್ರ ಬ್ಯಾಂಕ್ ಗಮನಹರಿಸುತ್ತದೆ.
ಅಂತರಾಷ್ಟ್ರೀಯ ವಹಿವಾಟು ಕೂಡ ಪರಿಶೀಲನೆಗೆ ಒಳಪಡಲಿದೆ. ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಪ್ರಶ್ನೆ ಮಾಡಬಹುದು. ಹೆಚ್ಚುತ್ತಿರುವ ಅಕ್ರಮ ವ್ಯವಹಾರ ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ, 2005ರ ಮನಿ ಲ್ಯಾಂಡರಿಂಗ್ ನಿಯಮವನ್ನು ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರ ಈ ಬಗ್ಗೆ ಬ್ಯಾಂಕುಗಳಿಗೆ ಕೂಡ ಮಹತ್ವದ ಸೂಚನೆ ನೀಡಿದೆ. ನಿಯಮದ ಪ್ರಕಾರ 50,000 ಕ್ಕಿಂತ ಹೆಚ್ಚಿನ ವಿದೇಶಿ ವಹಿವಾಟು ಮಾಡಿದರೆ ಅದರ ಮೇಲೆ ನಿಗಾ ವಹಿಸಲಾಗುತ್ತದೆ.
ಇನ್ನು ಮುಂದೆ ಯಾವುದೇ ವಿದೇಶಿ ವಹಿವಾಟು ಐವತ್ತು ಸಾವಿರ ರೂಪಾಯಿಗಳನ್ನು ಮೀರಿದರೆ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಈ ರೀತಿ ಐವತ್ತು ಸಾವಿರ ರೂಪಾಯಿಗಳನ್ನು ಮೀರಿದ ವಹಿವಾಟನ್ನು ಗುರುತಿಸಿ ವ್ಯವಹಾರಕ್ಕೆ ಸರಿಯಾದ ದಾಖಲೆಗಳನ್ನು ಕೇಳಲಾಗುತ್ತದೆ.
ಈ ಪರಿಶೀಲನೆಯ ವೇಳೆ ಸರಿಯಾದ ದಾಖಲೆ ಹಾಗೂ ಮಾಹಿತಿ ಜೊತೆಗೆ ಉದ್ದೇಶ ದೃಢೀಕರಣವನ್ನು ನೀವು ನೀಡಿದರೆ ನಿಮ್ಮ ವ್ಯವಹಾರದ ಮೇಲೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ ಸರ್ಕಾರ
ಇಲ್ಲವಾದರೆ ಪ್ರಶ್ನೆ ಮಾಡಿದ ವೇಳೆ ನಿಮ್ಮ ಬಳಿ ಸರಿಯಾದ ಉತ್ತರ ಇಲ್ಲದೆ ಇದ್ದರೆ ಆಗ ಸರ್ಕಾರದ ನಿಯಮ ಉಲ್ಲಂಘನೆ ಆಧಾರದ ಮೇಲೆ ದಂಡ ಪಾವತಿಸಬೇಕಾಗುತ್ತದೆ. ಒಟ್ಟಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ಹೊಸ ನಿಯಮ ಜಾರಿಗೆ ತಂದಿದೆ.






