ಕ್ರೀಡೆ

ಐಸಿಸಿ ಏಕದಿನ ವಿಶ್ವಕಪ್ 2023: ಕೊಹ್ಲಿ ಅಜೇಯ ಶತಕ, ಬಾಂಗ್ಲಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ

Views: 0

ಪುಣೆ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ 2023ರಲ್ಲಿ ಭಾರತ ತಂಡದ ಜೈತ್ರ ಯಾತ್ರೆ ಮುಂದುವರೆದಿದ್ದು ಇಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ರೋಹಿತ್ ಶರ್ಮಾ ಪಡೆ 7 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 257ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 41.3 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಭರ್ಜರಿ ಜಯಗಳಿಸಿದೆ.

ಭಾರತದ ಪರ ರೋಹಿತ್ ಶರ್ಮಾ 48ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ಅರ್ಧಶತಕ ವಂಚಿತರಾದರೆ, ಶುಭ್ ಮನ್ ಗಿಲ್ 53 ರನ್ ಗಳಿಸಿ ಹಸನ್ ಮಿರಾಜ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ 19ರನ್ ಗಳಿಸಿ ಔಟಾದರೆ, ಬಳಿಕ ಕೊಹ್ಲಿ ಜೊತೆಗೂಡಿದ ಮುರಿಯದ 4ನೇ ವಿಕೆಟ್ ಗೆ 83ರನ್ ಗಳ ಜೊತೆಯಾಟವಾಡಿದರು. ಕೊಹ್ಲಿ ಅಜೇಯ 103 ರನ್ ಗಳಿಸಿದರೆ, ಕೆಎಲ್ ರಾಹುಲ್ ಅಜೇಯ 34 ರನ್ ಗಳಿಸಿದರು. ಆ ಮೂಲಕ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಗಳ ಅಂತರದ ಭರ್ಜರಿ ಜಯಗಳಿಸಿತು.

ಇನ್ನು ಅರ್ಧಶತಕ ಸಿಡಿಸಿದ್ದ ಕೊಹ್ಲಿ ಶತಕದತ್ತ ದಾಪುಗಾರಿಸಿದ್ದರು. ಒಂದು ಹಂತದಲ್ಲಿ ಕೊಹ್ಲಿ ಶತಕ ಸಿಡಿಸುವುದು ಅಸಾಧ್ಯ ಎಂದೇ ಎಣಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ತಂಡ ಗೆಲ್ಲಲು 2ರನ್ ಗಳ ಅವಶ್ಯಕತೆ ಇದ್ದಾಗ ಕೊಹ್ಲಿಗೆ ಶತಕ ಸಿಡಿಸಲು 3ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಭರ್ಜರಿ ಮ್ಯಾಜಿಕ್ ಮಾಡಿದ ಕೊಹ್ಲಿ ಕೆಟ್ಟ ಎಸತಕ್ಕಾಗಿ ಕಾಯುತ್ತಿದ್ದರೆ

ನಸುಮ್ ಅಹ್ಮದ್ ಎಸೆದ 42ನೇ ಓವರ್ ನ 3ನೇ ಎಸೆತದಲ್ಲಿ ಕೊಹ್ಲಿ ಭರ್ಜರಿ ಹೊಡೆತ ಭಾರಿಸಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು ಮಾತ್ರವಲ್ಲದೇ ತಮ್ಮ ಶತಕವನ್ನೂ ಪೂರ್ಣಗೊಳಿಸಿಕೊಂಡರು.

Related Articles

Back to top button
error: Content is protected !!