ಕ್ರೀಡೆ

ವಿಶ್ವದ ನಂ.1 ಬೌಲರ್‌ ಆದ ಸಿರಾಜ್

Views: 57

ಏಷ್ಯಾಕಪ್‌ ಟೂರ್ನಿಯಲ್ಲಿನ ಅಮೋಘ ಪ್ರದರ್ಶನದಿಂದ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಬೌಲರ್‌ ಆಗಿ ಹೊರಹೊಮ್ಮಿದ್ದಾರೆ.

ಟೀಮ್‌ ಇಂಡಿಯಾ ಏಷ್ಯಾಕಪ್‌ ಫೈನಲ್‌ ನಲ್ಲಿ ಲಂಕಾವನ್ನು 50 ರನ್‌ ಗಳಿಗೆ ಆಲ್‌ ಔಟ್‌ ಮಾಡಿ, ಸುಲಭ ಜಯಸಾಧಿಸಿ, ಏಷ್ಯಾ ಚಾಂಪಿಯನ್‌ ಆಗಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ ಅದು ಸಿರಾಜ್‌ ಅವರ ಅಮೋಘ ಬೌಲಿಂಗ್‌ ಪ್ರದರ್ಶನ. ಸಿರಾಜ್ ಕೇವಲ 7 ಓವರ್‌ಗಳಲ್ಲಿ 6 ವಿಕೆಟ್ ಪಡೆದಿದ್ದರು. 21 ರನ್‌ ಕೊಟ್ಟು 6 ವಿಕೆಟ್‌ ಪಡೆದು ಲಂಕಾದ ಪ್ರಮುಖ ವಿಕೆಟ್‌ ಗಳನ್ನು ಪಡೆದಿದ್ದರು.

ಈ ಸಾಧನೆ ಅವರ ರ‍್ಯಾಂಕಿಂಗ್‌ ನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಐಸಿಸಿ ನೂತನ ಏಕದಿನ‌ ಬೌಲಿಂಗ್ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಂ.1 ಏಕದಿನ ಬೌಲರ್‌ ಆಗಿ ಸಿರಾಜ್‌ ಹೊರಹೊಮ್ಮಿದ್ದಾರೆ.

ಏಷ್ಯಾಕಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಸಿರಾಜ್‌ 637 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದರು. ಫೈನಲ್‌ ಪಂದ್ಯದಲ್ಲಿನ ಅವರ ಶ್ರೇಷ್ಠಮಟ್ಟದ ಬೌಲಿಂಗ್‌ ನಿಂದ ಅವರು 694 ಅಂಕಗಳನ್ನು ಪಡೆದು ನಂ.1 ಬೌಲರ್‌ ಆಗಿದ್ದಾರೆ. 678 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯದ ಜೋಶ್ ಹ್ಯಾಜಲ್‌ ವುಡ್‌ ಇದ್ದಾರೆ.

Related Articles

Back to top button
error: Content is protected !!