ಸಾಂಸ್ಕೃತಿಕ

ಕೊರ್ಗಿ- ಕಾಳಾವರ ಲಯನ್ಸ್ ಕ್ಲಬ್: ಶಿಕ್ಷಕ ದಿನಾಚರಣೆ

Views: 0

ಕುಂದಾಪುರ: ಕೊರ್ಗಿ- ಕಾಳಾವರ ಲಯನ್ಸ್ ಕ್ಲಬ್ ಇದರ ಮಾಸಿಕ ಸಭೆ  ಲಯನ್ಸ್ ಕ್ಲಬ್ ಅಧ್ಯಕ್ಷರಾದ  ರತ್ನಾಕರ ಶೆಟ್ಟಿ ಅವರ ಮನೆಯ ಫಾರ್ಮ್ ಹೌಸ್ ನಲ್ಲಿ ಬುಧವಾರ ಕೆದೂರಿನಲ್ಲಿ ನಡೆಯಿತು.

ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಆದರ್ಶ ದೈಹಿಕ ಶಿಕ್ಷಕ ಶಂಕರ್ ಶೆಟ್ಟಿ ಅವರಿಗೆ ಸನ್ಮಾನ ನೀಡಿ, ಗುರು ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಶಂಕರ್ ಶೆಟ್ಟಿ ಅವರು ಮಾತನಾಡಿ, ನನಗೆ ನೀಡಿದ ಸನ್ಮಾನ ಇಡೀ ಶಿಕ್ಷಕರ ಸಮುದಾಯಕ್ಕೆ ಸಂದ ಗೌರವ, ಯಾವುದೇ ಫಲಾ ಅಪೇಕ್ಷೆಗಳಿಲ್ಲದೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರೀತಿ, ಸಹ ಬಾಳ್ವೆ, ಸಹಾನುಭೂತಿ ಹೊಂದಿದ ಲಯನ್ಸ್ ಕ್ಲಬ್ ನ ಜನಪರ ಕಾರ್ಯಗಳು ನಿಜಕ್ಕೂ ಶ್ಲಾಘನೀಯ, ಉತ್ತಮ ಜನಪರ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಲಯನ್ಸ್ ಕ್ಲಬ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ರತ್ನಾಕರ ಶೆಟ್ಟಿ ಸ್ವಾಗತಿಸಿದರು.ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಬದಲಾವಣೆಯಲ್ಲಿ ಉತ್ತಮ ನಾಯಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಯುವ ಮನಸ್ಸುಗಳನ್ನು ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದರು.

ವೇದಿಕೆಯಲ್ಲಿ ಕೋಶಾಧಿಕಾರಿ ಸುಖಾನಂದ ಹೆಗ್ಡೆ, ಉಮಾನಾಥ್ ಹೆಗ್ಡೆ, ಚತುರ್ ಶೆಟ್ಟಿ, ಅಶೋಕ್ ಶೇರಿಗಾರ್ ಹೂವಿನಕೆರೆ, ಗೌರೀಶ್ ಹೆಗ್ಡೆ, ರವೀಂದ್ರ, ಶರತ್ ಶೆಟ್ಟಿ, ಅರುಣ, ಪುನೀತ್ ಶೆಟ್ಟಿ, ಸುಧಾಕರ್ ಶೆಟ್ಟಿ, ಸುಜಿತ್ ಕುಮಾರ್, ಸುನಿಲ್ ಶೆಟ್ಟಿ, ರಾಕೇಶ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಇದ್ದರು.

ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದಿನಕರ್ ಹೆಗ್ಡೆ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಶೆಟ್ಟಿ ದ್ವಜವಂದನೆ ವಾಚಿಸಿದರು. ಸಂಕೇತ್ ಶೆಟ್ಟಿ ನೀತಿ ಸಂಹಿತೆ ಬೋಧಿಸಿದರು. ಕಾರ್ಯದರ್ಶಿ ಸುಧೀರ್ ಶೆಟ್ಟಿ ಮಲ್ಯಾಡಿ ವಂದಿಸಿದರು.

Related Articles

Back to top button
error: Content is protected !!