ಬಟ್ಟೆ ಸೀರೆ ನೇಯ್ದು ಗೌರವ ಕಾಪಾಡುತ್ತಿರುವ ಪದ್ಮಶಾಲಿಗರು ಮಾದರಿ: ಸಚಿವ ಎಸ್ ಶಿವರಾಜ್ ತಂಗಡಗಿ

Views: 1
ಬಟ್ಟೆ ಸೀರೆ ನೇಯ್ದು ಮತ್ತೊಬ್ಬರ ಗೌರವ ಕಾಪಾಡುತ್ತಿರುವ ಪದ್ಮಶಾಲಿ ಸಮಾಜವು ತನ್ನ ಇತಿಮಿತಿಯೊಳಗೆ ಕೆಲಸ ಮಾಡಿ ಯಾರಿಗೂ ಕೆಡುಕು ಬಯಸದ ಸಮಾಜವಾಗಿದೆ ಎಂದು ಹಿಂದುಳಿದ ವರ್ಗ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಎಸ್ ಶಿವರಾಜ್ ತಂಗಡಗಿ ಹೇಳಿದರು.
ಪದ್ಮಶಾಲಿ ನೇಕಾರ ಸಮಾಜದ ಸಮ್ಮೇಳನದಿಂದ ಲೇಖಕ ಡಾ. ಕೆ.ಜಿ ಲಕ್ಷ್ಮೀ ನಾರಾಯಣಪ್ಪ ರಚಿಸಿರುವ ಪದ್ಮಶಾಲಿ ನೇಕಾರ ಇತಿಹಾಸ ಮತ್ತು ಸಂಸ್ಕೃತಿ ದರ್ಶನ ಹಾಗೂ ಕೊಡಿಯಾಲ ಪದ್ಮಶಾಲಿಗರ ಸಂಸ್ಕೃತಿ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪದ್ಮಶಾಲಿ ಸಮಾಜದ ಜನತೆಗೆ ನಾನು ಬೆಳೆದಿದ್ದೇನೆ ಹಿಡಿದ ಹಠ ಸಾಧಿಸುವಲ್ಲಿ ಪದ್ಮಶಾಲಿ ಸಮಾಜದ ವರು ಪ್ರಮುಖರು ಎಂದರು.
ಪದ್ಮಶಾಲಿ ನೇಕಾರ ಇತಿಹಾಸ ಮತ್ತು ಸಂಸ್ಕೃತಿ ದರ್ಶನ ಮೂಲಕ ಪದ್ಮಶಾಲಿ ಸಮಾಜದ ಹಿರಿಯರು, ಪೂರ್ವಜರು ,ಮುಂದಿನ ಯುವ ಪೀಳಿಗೆ ಏನು ಮಾಡಬೇಕು ಎಂಬುದನ್ನು ಸೊಗಸಾಗಿ ತಿಳಿಸಲಾಗಿದೆ.
ಪದ್ಮಶಾಲಿ ಸಮಾಜದ ಮಾಹಿತಿ ಕ್ರೂಢೀಕರಿಸಿ ಪುಸ್ತಕ ಬರೆಯುವುದು ಅಷ್ಟು ಸುಲಭದ ಕೆಲಸ ಅಲ್ಲ. ಆಂಧ್ರ ಮೂಲಕ ಪದ್ಮಶಾಲಿ ಸಮಾಜವು ಕರ್ನಾಟಕಕ್ಕೆ ವಲಸೆ ಬಂದಿದೆ, ನಾವು ಆಂಧ್ರ ಮೂಲದವರೇ ಆದರೇ ಕರ್ನಾಟಕಕ್ಕೆ ಬಂದ ಬಳಿಕ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇವೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಂ, ಮಾಜಿ ವಿಧಾನ ಪರಿಷತ್ ಸದಸ್ಯ ಕೆಸಿಕೊಂಡಯ್ಯ, ಉತ್ತರ ಕರ್ನಾಟಕದ ಪದ್ಮಶಾಲಿ ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.






