ಸಾಮಾಜಿಕ

ದೀಪಾವಳಿ ಹಬ್ಬದ ಸಂಭ್ರಮ: ಆಶ್ರಮದಲ್ಲಿ ಊಟೋಪಚಾರ ನೀಡಿ, ಮಾನವೀಯ ಸೇವೆಗೈದ ಕುಂದಾಪುರದ ಎಎಸ್ಐ! 

Views: 212

ಕನ್ನಡ ಕರಾವಳಿ ಸುದ್ದಿ: ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಕುಂದಾಪುರ ರಸ್ತೆಯಲ್ಲಿ ಅಸ್ವಸ್ಥರಾಗಿ ಮಾನಸಿಕ ಕಾಯಿಲೆಯಿಂದ ಸಂಚರಿಸುತಿದ್ದ ಶ್ರೀ ಸುರೇಶ ಕಿಣಿ ಇವರನ್ನು ನಾವು ಮತ್ತು ನಮ್ಮ ಜೊತೆಗೆ ಕುಂದಾಪುರ ಪೊಲೀಸ್ ಠಾಣೆಯ ASIಯವರಾದ ಮೋಹನ್ ಪೂಜಾರಿ ಇವರು ಹೊಸ ಬದುಕು ಎಂಬ ಆಶ್ರಮಕ್ಕೆ ಕರೆದೊಯ್ದು ಚಿಕಿತ್ಸೆಯೊಂದಿಗೆ ಅವರಿಗೆ ಆಶ್ರಯ ಕಲ್ಪಿಸಿದರು.

ಆ ಆಶ್ರಮದಲ್ಲಿ ಇದೇ ಪರಿಸ್ಥಿತಿಯಲ್ಲಿರುವ ಸುಮಾರು 60 ಜನ ಆಶ್ರಿತರಿದ್ದು ಅವರ ಊಟೋಪಚಾರ ಚಿಕಿತ್ಸೆಗೆ ಹಾಗೂ ಅವರ ಸೇವೆಯನ್ನು ವಿನಯಚಂದ್ರ ದಂಪತಿಗಳು ಸೇವೆ ಮಾಡುತ್ತಿದ್ದಾರೆ.

ಕುಂದಾಪುರ ಠಾಣೆಯ ASI ಮೋಹನ್ ಪೂಜಾರಿ ಅವರು ಇಲ್ಲಿಯ ಆಶ್ರಿತರಿಗೆ ದೀಪಾವಳಿಯ ಹಬ್ಬದ ಪ್ರಯುಕ್ತ ದೀಪಾವಳಿ ಹಬ್ಬವನ್ನು ಒಂದಿಷ್ಟು ಸಮಯ ಇಲ್ಲಿಯ ಆಶ್ರಿತರ ಜೊತೆ ಕಳೆದು ಅವರಿಗೆ ಸಹ ಭೋಜನದ ವ್ಯವಸ್ಥೆ ಮಾಡಿಸಿದರು.

ಹೊಸ ಬದುಕು ಆಶ್ರಮದಲ್ಲಿರುವ ಅಶ್ರಿತರನ್ನು ಪ್ರತೀ ದಿನ ಶುಚಿಗೊಳಿಸಿ ಅವರಿಗೆ ಯೋಗ, ಧ್ಯಾನ,ಭಕ್ತಿ, ಶ್ಲೋಕ, ಪ್ರಾಣಾಯಾಮ ನಮ್ಮ ಸಂಸ್ಕೃತಿ ಶಿಕ್ಷಣದೊಂದಿಗೆ ಮಾನಸಿಕ ಕಾಯಿಲೆಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಿ ಮನೆಯ ಸದಸ್ಯರಂತೆ ಆರೈಕೆ ಮಾಡುತ್ತಿರುವ ಹೊಸ ಬದುಕು ಆಶ್ರಮದ ಸ್ಥಾಪಕರಾದ ವಿನಯಚಂದ್ರ ದಂಪತಿಗಳಿಗೆ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಕುಂದಾಪುರದ ಎಎಸ್ ಐ ಮೋಹನ್ ಪೂಜಾರಿ ಅವರಿಗೆ ಸಾರ್ವಜನಿಕರ ಪರವಾಗಿ ಸಮಾಜ ಸೇವಕ ಕೋಡಿ ಅಶೋಕ್ ಪೂಜಾರಿ ಅಭಿನಂದನೆ ಸಲ್ಲಿಸಿದರು.

Related Articles

Back to top button
error: Content is protected !!