ಶಿಕ್ಷಣ

ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೈಬರ್ ಕ್ರೈಮ್ ಜಾಗೃತಿ ಅಭಿಯಾನ ಕಾರ್ಯಕ್ರಮ

Views: 8

ಕನ್ನಡ ಕರಾವಳಿ ಸುದ್ದಿ:”ಸೈಬರ್ ಕ್ರೈಮ್ ಗೆ ಒಳಗಾಗುವವರು ಸಮಾಜದ ಸುಶಿಕ್ಷಿತ ವ್ಯಕ್ತಿಗಳೇ ಆಗಿದ್ದು, ಯಾವುದೇ APK ಫೈಲ್ಸ್ ಗಳನ್ನು ತೆರೆಯುವ ಮುಂಚೆ, ಸುಳ್ಳು ಆಪಾದನೆ ಹೊರಿಸಿ ಸಿಕ್ಕಿಸಿ ಹಾಕುವಂಥ ಡಿಜಿಟಲ್ ಎರೆಸ್ಟ್ ನಂಥ‌ ನಯವಂಚನೆಯ ಬಗ್ಗೆ ಎಚ್ಚರವಿರಬೇಕು. ಭೀತಿ ಹುಟ್ಟಿಸಿ ನಡೆಸುವ ಮೋಸದ ಜಾಲದಲ್ಲಿ, App ಗಳ ಸಾಲದ ಸುಳಿಯಲ್ಲಿ ಸಿಲುಕದ ಹಾಗೆ ಜಾಗೃತರಾಗುವ ಮಾಹಿತಿಯನ್ನು ಯುವಜನರು ಪಡೆಯುತ್ತಿರಬೇಕು” ಎಂದು ಕುಂದಾಪುರ ಪೊಲೀಸ್ ಠಾಣಾಧಿಕಾರಿ ಶ್ರೀ ನಂಜ ನಾಯ್ಕರವರು ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಕುಂದಾಪುರ ಪೊಲೀಸ್ ಠಾಣೆಯವರು ಆಯೋಜಿಸಿದ ‘ ಸೈಬರ್ ಕ್ರೈಮ್ ಜಾಗೃತಿ ಅಭಿಯಾನ ‘ ಕಾರ್ಯಕ್ರಮದಲ್ಲಿ ಕರೆ ನೀಡಿದರು.

ಕುಂದಾಪುರ ಠಾಣೆಯ ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ಮಂಜುಳಾ ಹಮ್ಮರ್ ರವರು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದ ಪೋರ್ಟಲ್ಸ್ ಬಳಸುವ ಮೊದಲು ಸೆಕ್ಯೂರಿಟಿ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸಿ, ಡೀಪ್ ಫೇಕ್ ತಂತ್ರಜ್ಞಾನದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು’ ಎಂದು ತಿಳಿಸಿದರು.

ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ಆರಕ್ಷಕ ಠಾಣೆಯ ಸಿಬ್ಬಂದಿಗಳಾದ ವಿಲ್ಫ್ರೆಡ್ ಡಿಸೋಝಾ ಮತ್ತು ರಾಜು ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Back to top button
error: Content is protected !!