ಶಿಕ್ಷಣ

ಕುಂದಾಪುರ ಆರ್.ಎನ್.‌ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ C.A, C.S, C.M.A ಕೋರ್ಸ್ ಓರಿಯೇಂಟೇಶನ್

Views: 19

ಕನ್ನಡ ಕರಾವಳಿ ಸುದ್ದಿ: “ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಇಂದು C.A, C.S ಅಥವಾ CMA ವ್ಯಾಸಂಗ ಕೈಗೊಂಡು ಸಫಲರಾಗುತ್ತಿದ್ದಾರೆ. ದೇಶದ ಪ್ರಸಕ್ತ ಆರ್ಥಿಕ‌‌ ಬೆಳವಣಿಗೆಯ ಪ್ರಮಾಣಕ್ಕೆ ಇನ್ನೂ ಹೆಚ್ಚೆಚ್ಚು ಸಿ.ಎ, ಸಿ.ಎಸ್ ಪದವೀಧರರ ಅಗತ್ಯವಿದ್ದು, ವ್ಯಾಪಾರೋದ್ಯಮಗಳನ್ನು ನಡೆಸಲು ಬೇಕಾದ ಕೌಶಲ್ಯವನ್ನೂ ಇಂಥ ತರಬೇತಿಗಳಿಂದ‌ ಸಿದ್ಧಿಸುವುದನ್ನು ಈಗಿನ ವಾಣಿಜ್ಯ ಪ್ರಪಂಚದಲ್ಲಿ ಕಾಣುತ್ತಿದ್ದೇವೆ ಎಂದು ಉಡುಪಿಯ ವೀ ರೀಚ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ C.S. ಸಂತೋಷ್ ಪ್ರಭುರವರು ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ ಶೆಟ್ಟಿಯವರು ಓರಿಯೆಂಟೇಶನ್ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು‌.

ವಿ ರೀಚ್ ಅಕಾಡೆಮಿಯ ಆಡಳಿತಾಧಿಕಾರಿ ಶ್ರೀ ನಾಗೇಶ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ‌ ಶೆಣೈಯವರು ಧನ್ಯವಾದ ಸಲ್ಲಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. 

Related Articles

Back to top button
error: Content is protected !!