ಶಿಕ್ಷಣ

ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎನ್ಎಸ್ಎಸ್  ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭ

Views: 4

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಬಿದ್ಕಲ್‌ಕಟ್ಟೆ ಇಲ್ಲಿ ಉದ್ಘಾಟನೆಗೊಂಡಿತು.

ಶಿಬಿರದ ಉದ್ಘಾಟನೆಯನ್ನು ಶ್ರೀ ಪ್ರಶಾಂತ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್  ಬಿದ್ಕಲ್‌ಕಟ್ಟೆ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಇಂತಹ ಶಿಬಿರದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ. ವಿಧ್ಯಾರ್ಥಿಗಳು ಸೇವೆ ಮಾಡುವುದರ ಮೂಲಕ ತಮ್ಮ ಬದುಕನ್ನು ಸಾರ್ಥಕ ಗೊಳಿಸಬೇಕೆಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಬಾಬು ಶೆಟ್ಟಿ ತಗ್ಗರ್ಸೆ ಇವರು ವಹಿಸಿ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ಸಹಬಾಳ್ವೆ ಮತ್ತು ನಾಯಕತ್ವದಂತಹ ಒಳ್ಳೆಯ ಮೌಲ್ಯಗಳು ಬೆಳೆಯುತ್ತದೆ ಸಮಾಜಮುಖಿ ಕೆಲಸದೊಂದಿಗೆ ದೇಶ ಸೇವೆ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಶೆಟ್ಟಿ, ದೇವಲ್ ಬೆಟ್ಟು, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಮೊಳಹಳ್ಳಿ, ಶ್ರೀ ಗೌತಮ್ ಶೆಟ್ಟಿ ಉಪಾಧ್ಯಕ್ಷರು ಎಸ್.ಡಿ.ಎಂ.ಸಿ. ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ ಶ್ರೀಮತಿ ಗುಣರತ್ನ ಪ್ರಾಂಶುಪಾಲರು ಕೆ. ಪಿ. ಎಸ್, ಬಿದ್ಕಲ್ ಕಟ್ಟೆ, ಶ್ರೀಮತಿ ಉಷಾ, ಉಪ ಪ್ರಾಂಶುಪಾಲರು-2 ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ ಇವರುಗಳು ವಹಿಸಿ ಶಿಬಿರಕ್ಕೆ ಶುಭ ಹಾರೈಸಿದರು.

ಎನ್ ಎಸ್ ಎಸ್ ಘಟಕದ ನಾಯಕರುಗಳಾದ ಕುಮಾರ್ ರಂಜನ್, ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ಕುಮಾರಿ ರಶ್ಮಿತಾ ದ್ವಿತೀಯ ಕಲಾ ವಿಭಾಗ ಇವರುಗಳು ಉಪಸ್ಥಿತರಿದ್ದರು.

ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀಮತಿ ಜ್ಯೋತಿ ಎ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗೋಪಾಲಕೃಷ್ಣ ಜಿ ಬಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿ ನವ್ಯಶ್ರೀ ವಂದಿಸಿದರು.

Related Articles

Back to top button
error: Content is protected !!