ಧಾರ್ಮಿಕ

ಸಾಸ್ತಾನ-ಗುಂಡ್ಮಿ ಪಾತ್ರಿ ವೆಂಕಟರಮಣ ಶೆಟ್ಟಿಗಾರ ನಿಧನ 

Views: 174

ಕನ್ನಡ ಕರಾವಳಿ ಸುದ್ದಿ: ಸಾಸ್ತಾನ- ಗುಂಡ್ಮಿ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಸಪರಿವಾರ ಚಿಕ್ಕಮ್ಮ ಮತ್ತು ಚಂಡಿ- ಚಾಮುಂಡೇಶ್ವರಿ ಕಾಳಿಕಾಂಬ ದೇವಸ್ಥಾನದ ಪಾತ್ರಿಗಳಾದ ವೆಂಕಟರಮಣ ಶೆಟ್ಟಿಗಾರ (86) ಅಲ್ಪ ಕಾಲದ ಅಸೌಖ್ಯದಿಂದ ಅಕ್ಟೋಬರ್ 12ರಂದು ದೈವಾಧೀನರಾದರು.

ಮೃತರ ಪತ್ನಿ, ಮೂವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

ಇವರು ನಾಡಿನಾದ್ಯಂತ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಮತ್ತು ಇಷ್ಟಾರ್ಥ ಈಡೇರಿಕೆಗಾಗಿ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಪ್ರಶ್ನಾ ಚಿಂತನೆ ಮೂಲಕ ಪರಿಹಾರ ನೀಡುತ್ತಿದ್ದರು. ಇವರು ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೂಡು ಕಟ್ಟಿಗೆ ಸೇರಿದವರಾಗಿರುತ್ತಾರೆ.

Related Articles

Back to top button
error: Content is protected !!