ರಾಜಕೀಯ

ಡಿಸೆಂಬರ್ 15ರೊಳಗೆ ತಾಪಂ, ಜಿಪಂ ಚುನಾವಣೆ ಘೋಷಣೆ; ಕಾರ್ಯಕರ್ತರು ಸಜ್ಜಾಗಲು ರಾಯರೆಡ್ಡಿ ಕರೆ

Views: 136

ಕನ್ನಡ ಕರಾವಳಿ ಸುದ್ದಿ: ಬರುವ ಡಿಸೆಂಬರ್ 15 ರೊಳಗೆ ತಾಪಂ, ಜಿಪಂ ಚುನಾವಣೆ ಘೋಷಣೆಯಾಗಲಿದ್ದು, ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕರೆ ನೀಡಿದರು.

ಶುಕ್ರವಾರ ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ತಾಪಂ, ಜಿಪಂ ಚುನಾವಣೆ ಕ್ಷೇತ್ರಗಳ ಮಿಸಲಾತಿಯನ್ನು ಸರಕಾರ ಶೀಘ್ರ ಪ್ರಕಟಿಸಲಿದೆ. ಚುನಾವಣೆ ಡಿ.15 ಕ್ಕೆ ಅಧಿಸೂಚನೆ ಹೊರಬೀಳುತ್ತದೆ. ಹೀಗಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಕಾರ್ಯಕರ್ತರು ಸಿದ್ದತೆ ಮಾಡಿಕೊಳ್ಳಬೇಕು ಎಂದರು.

Related Articles

Back to top button
error: Content is protected !!