ರೋಟರಿ ಸಮುದಾಯದಳ ಕೊರವಡಿ, ಕುಂಭಾಶಿ ಸ್ವಾತಂತ್ರ್ಯ ದಿನಾಚರಣೆ: ಮಾಜಿ ಸೈನಿಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

Views: 2
ಕುಂದಾಪುರ: ಕೋಟೇಶ್ವರ ರೋಟರಿ ಕ್ಲಬ್ ಅಂಗಸಂಸ್ಥೆ ರೋಟರಿ ಸಮುದಾಯದಳ ಕೊರವಡಿ, ಕುಂಭಾಶಿ ಇವರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಜಿ ಸೈನಿಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಇನ್ನಿತರ ಕಾರ್ಯಕ್ರಮ ನಡೆಯಿತು.
ದಿನಾಂಕ 15-8- 2023ನೇ ಮಂಗಳವಾರ ಬೆಳಿಗ್ಗೆ ಸ್ವತಂತ್ರೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ಮಾಡಿ ಸಿಹಿ ತಿಂಡಿ ಹಂಚಲಾಯಿತು.

ಮಧ್ಯಾಹ್ನ 3 ಗಂಟೆಗೆ ಪದಪ್ರಧಾನ ಸಮಾರಂಭವನ್ನು ರೋಟರಿ ಸಮುದಾಯದಳದ ಸಭಾಭವನದಲ್ಲಿ ಶ್ರೀಯುತ ಮಹಾಬಲ.ಎಂ ಪುತ್ರನ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷರಾದ ರೊಟೇರಿಯನ್ ಜಗದೀಶ್ ಮೊಗವೀರ, ಕಾರ್ಯದರ್ಶಿ ರೊಟೇರಿಯನ್ ರಾಜು ಮೊಗವೀರ ಹಾಗೂ ಆಸಿಸಿ ಪ್ರತಿನಿಧಿ ಚಂದ್ರಶೇಖರ್ ಶೆಟ್ಟಿ ಮತ್ತು ರೊಟೇರಿಯನ್ ನಾಗರಾಜ್ ಆಚಾರ್, ಸನ್ಮಾನಗೊಳ್ಳಲಿರುವ ಮಾಜಿ ಸೈನಿಕರಾದ ಶಿವಣ್ಣ ಎಂ.ಬಿ .ಮಣೂರು ಪಡುಕೆರೆ, ಸಂಘದ ಕಾರ್ಯದರ್ಶಿ ಕೆ ಸುರೇಶ್ ವಿಠಲವಾಡಿ, ನಿಯೋಜಿತ ಅಧ್ಯಕ್ಷರಾದ ಕೆ ಪಿ ನರಸಿಂಹಮೂರ್ತಿ ಬುದ್ಯ, ನಿಯೋಜಿತ ಕಾರ್ಯದರ್ಶಿ ಸುಪ್ರೀತ ಪುರಾಣಿಕ್ ಸಭೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಿಗೆ ಕಾಲರ್ ತೊಡಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸಮುದಾಯದ ಸದಸ್ಯರಾದ ರಮೇಶ್ ಕಾಂಚನ್ ರವರು ಸ್ವಾಗತಿಸಿದರು, ಸ್ಥಾಪಕ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯಾಯರು ಪ್ರಾಸ್ತವಿಕ ನುಡಿ ನಮನ ಗೈದರು, ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ರೋಟರಿ ಕ್ಲಬ್ ಅಧ್ಯಕ್ಷರಾದ ರೊಟೇರಿಯನ್ ಜಗದೀಶ್ ಮೊಗವೀರ ಪ್ರಧಾನವನ್ನು ನೆರವೇರಿಸಿದರು, ಸನ್ಮಾನ ಪತ್ರವನ್ನು ಶ್ರೀನಿಧಿ ಉಪಾಧ್ಯಾಯ ವಾಚಿಸಿದರು.
ವೇದಿಕೆಯಲ್ಲಿದ್ದ ಗಣ್ಯರು ಮಾಜಿ ಸೈನಿಕರನ್ನು ಶಾಲು. ಫಲಪುಷ್ಪ ಸನ್ಮಾನ ಪತ್ರವನ್ನು ನೀಡಿ ಸನ್ಮಾನ ಮಾಡಲಾಯಿತು.
ಸನ್ಮಾನಿತರು ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರವಡಿಯ ಒಂದರಿಂದ ಏಳನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ಏಳು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಸುಮೇದ್ ಪುರಾಣಿಕ್, ಸವಿತಾ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಅಮೂಲ್ಯ ಗುರುಕಿರಣ್, ಧನುಷ್ , ಪೃಥ್ವಿಕ್ , ಸುಮಂತ್ ರವರನ್ನ ಸನ್ಮಾನಿಸಲಾಯಿತು, ಇವರ ಹೆಸರುಗಳನ್ನು ಶ್ವೇತಾ ಎಸ್ಆರ್ ವಾಚಿಸಿದರು,
ಸಂಸ್ಥೆಯ ಸದಸ್ಯರು ಹಾಗೂ ಗುರುಗಳಾದ ಡಾ. ಗಣೇಶ್ ಗಂಗೊಳ್ಳಿಯವರಿಂದ ಸುಗಮ ಸಂಗೀತ ಕಲಿತ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಯನ್ನು ಹಾಡಿಸಲಾಯಿತು ಮತ್ತು ಸಂಘದ ಮಹಿಳಾ ಸದಸ್ಯರು ದೇಶಭಕ್ತಿ ಗೀತೆಯನ್ನು ಹಾಡಿದರು.
15 ಜನ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು. ಸಭೆಯಲ್ಲಿದ್ದ ಮುಖ್ಯ ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಗಣೇಶ್ ಗಂಗೊಳ್ಳಿ ನೆರವೇರಿಸಿದರು ಕೊನೆಯಲ್ಲಿ ಅತಿಥಿಗಳಿಗೆ ಸ್ಮರಳಿಕೆಯನ್ನು ನೀಡುವುದರೊಂದಿಗೆ, ನೂತನ ಕಾರ್ಯದರ್ಶಿ ಸುಪ್ರೀತಾ ಪುರಾಣಿಕ್ ವಂದನಾರ್ಪಣೆಗೈದರು. ಲಘು ಉಪಹಾರ ದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.






