ಸಾಮಾಜಿಕ

ರೋಮ್ಯಾನ್ಸ್‌ ಹೆಸರಲ್ಲಿ ನಶೆಯ ಹಾಲು ಕುಡಿಸಿದ ವಧು..ಮದುವೆಯಾದ ವರನಿಗೆ ಪ್ರಥಮ ರಾತ್ರಿಯಿಂದ ಬೆಳಿಗ್ಗೆ ಎದ್ದಾಗ ಬಿಗ್ ಶಾಕ್!

Views: 154

ಕನ್ನಡ ಕರಾವಳಿ ಸುದ್ದಿ: ಲಕ್ಷಾಂತರ ರೂಪಾಯಿ ಸುರಿದು ಮದುವೆಯಾದ ಮೊದಲ ರಾತ್ರಿಯೇ ನವವಧು ಕೈಕೊಟ್ಟು ಪರಾರಿಯಾದ ಘಟನೆ ನಡೆದಿದೆ.

ಗಂಡನಿಗೆ ನಶೆಯುಕ್ತ ಹಾಲು ಕುಡಿಸಿ ಮನೆಯಲ್ಲಿದ್ದ ನಗ-ನಾಣ್ಯದೊಂದಿಗೆ ಎಸ್ಕೇಪ್ ಆಗಿದ್ದ ಯುವತಿ ಹಾಗೂ ಆಕೆಯ ಜಾಲವನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಮಥುರಾ ನಿವಾಸಿಯೊಬ್ಬರಿಗೆ ವಯಸ್ಸಾದರೂ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಮದುವೆಯಾಗಲು ಕಾತರಿಸುತ್ತಿದ್ದ ಈತನಿಗೆ ಇಬ್ಬರು ಮಧ್ಯವರ್ತಿಗಳು (ಬ್ರೋಕರ್‌ಗಳು) ರುಬೀನಾ ಎಂಬ ಯುವತಿಯನ್ನು ಪರಿಚಯಿಸಿದ್ದರು. ಸುಮಾರು 2 ಲಕ್ಷ ರೂಪಾಯಿ ಪಡೆದು ದೇವಸ್ಥಾನವೊಂದರಲ್ಲಿ ಈ ಮದುವೆಯನ್ನು ನೆರವೇರಿಸಲಾಗಿತ್ತು. ಬಹುದಿನಗಳ ಕನಸು ನನಸಾದ ಖುಷಿಯಲ್ಲಿ ವರನು ವಧುವನ್ನು ಸಂಭ್ರಮದಿಂದ ಮನೆಗೆ ಕರೆತಂದಿದ್ದನು.

ಶಾಸ್ತ್ರೋಕ್ತವಾಗಿ ಮದುವೆಯಾಗಿ ಮೊದಲ ರಾತ್ರಿಯ ಸಂಭ್ರಮದಲ್ಲಿದ್ದ ನವದಂಪತಿಗಳ ಕೋಣೆಯಲ್ಲಿ ಅಸಲಿ ಆಟ ಶುರುವಾಗಿದೆ. ಮಧ್ಯರಾತ್ರಿ ವೇಳೆ ಪತ್ನಿಗೆ ರೊಮ್ಯಾನ್ಸ್ ಮಾಡುವ ಹುಮ್ಮಸ್ಸಿನಲ್ಲಿದ್ದ ಗಂಡನಿಗೆ, “ಇಲ್ಲೊಂದು ಸ್ಪೆಷಲ್ ಹಾಲಿದೆ, ಇದರಲ್ಲಿ ರೊಮ್ಯಾನ್ಸ್ ಹೆಚ್ಚಿಸುವ ಔಷಧ ಬೆರೆಸಿದ್ದೇನೆ, ಕುಡಿಯಿರಿ ಬಾಬು” ಎಂದು ರುಬೀನಾ ಪ್ರೀತಿಯಿಂದ ಗ್ಲಾಸ್ ನೀಡಿದ್ದಾಳೆ. ಹೆಂಡತಿಯ ಮಾತನ್ನು ನಂಬಿದ ಅಮಾಯಕ ಗಂಡ ಹಾಲನ್ನು ಗಟಗಟನೆ ಕುಡಿದಿದ್ದಾನೆ.

ಹಾಲು ಕುಡಿದ ಕೆಲವೇ ಕ್ಷಣಗಳಲ್ಲಿ ಆತ ತಲೆತಿರುಗಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಬೆಳಿಗ್ಗೆ ಎಚ್ಚರವಾಗಿ ನೋಡಿದಾಗ ಪತ್ನಿ ನಾಪತ್ತೆಯಾಗಿದ್ದಳು. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನೂ ಗುಡಿಸಿ ಗುಂಡಾಂತರ ಮಾಡಿ ಆಕೆ ಜಾಗ ಖಾಲಿ ಮಾಡಿದ್ದು ಬೆಳಕಿಗೆ ಬಂದಿದೆ.

ಕೈಕೊಟ್ಟ ವಧುವಿನ ಫೋಟೋ ಹಿಡಿದು ಕಣ್ಣೀರಿಡುತ್ತಾ ಠಾಣೆಯ ಮೆಟ್ಟಿಲೇರಿದ ವರ, ನಡೆದ ಘಟನೆಯನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಮಥುರಾ ಪೊಲೀಸರು, ಕೇವಲ ಕೆಲವೇ ಗಂಟೆಗಳ ಕಾಲಾವಧಿಯಲ್ಲಿ ಖತರ್ನಾಕ್ ವಧು ರುಬೀನಾ ಹಾಗೂ ಆಕೆಗೆ ಸಾಥ್ ನೀಡಿದ್ದ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Related Articles

Back to top button
error: Content is protected !!