ಶಿಕ್ಷಣ

ವಕ್ವಾಡಿ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ “ಗೌರಿ ಟೀಚರ್” ಅವರಿಗೆ ಶಿಕ್ಷಕ ದಿನಾಚರಣೆಯ ಸನ್ಮಾನ

Views: 0

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಬೋಧನೆಯೊಂದಿಗೆ ಸಮಯ ಪಾಲನೆ, ಶಿಸ್ತು, ಕರ್ತವ್ಯ ನಿಷ್ಠೆಗೆ ಹೆಸರಾದ ಆದರ್ಶ ಶಿಕ್ಷಕಿ ‘ಗೌರಿ ಟೀಚರ್’ ವಕ್ವಾಡಿ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು.

ಅವರು 1963 ರಲ್ಲಿ ವೃತ್ತಿಗೆ ಸೇರಿ ಕೈಲ್ಕೆರೆ, ಅಮಾಸೆಬೈಲು, ಬೀಜಾಡಿ ಮತ್ತು ವಕ್ವಾಡಿಯಲ್ಲಿ 1977 ರಲ್ಲಿ ಕರ್ತವ್ಯಕ್ಕೆ ಸೇರಿ 1999 ರಲ್ಲಿ ಬೀಜಾಡಿಯಲ್ಲಿ ನಿವೃತ್ತಿಯಾಗಿದ್ದಾರೆ.

ಕುಂದಾಪುರ ತಾಲೂಕು ನಿವೃತ್ತ ಸರಕಾರಿ ಸಂಘದ 2026ನೇ ಸಾಲಿನ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಕ್ವಾಡಿ ಸಮೀಪದ ಮೂಡುಗೋಪಾಡಿ ನಿವಾಸದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಗೌರಿ ಶೆಟ್ಟಿಗಾರ್ ಅವರನ್ನು ಸೆ.3ರಂದು ಸನ್ಮಾನಿಸಲಾಯಿತು.

ನಿವೃತ್ತ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ರಘುವೀರ ಕೆ. ಸದಸ್ಯರಾದ ಸೂರ್ಯಕಾಂತಿ, ಸರೋಜಿನಿ, ಹಿರಿಯ ನಾಗರಿಕರ ವೇದಿಕೆಯ ಸದಸ್ಯ ಕುಮಾರನ್ ಪಿ. ಮತ್ತು ಶಿಕ್ಷಕಿ ವಸಂತಿ ಎಚ್. ಉಪಸ್ಥಿತರಿದ್ದರು.

Related Articles

Back to top button
error: Content is protected !!