ಇತರೆ

ಸೆ.6ಕ್ಕೆ ನಿವೃತ್ತ ಶಿಕ್ಷಕ ಸಾಲಿಕೇರಿ ಕುಂಚಿಮನೆ ಸದಾಶಿವ ಶೆಟ್ಟಿಗಾರ್ ಶ್ರದ್ಧಾಂಜಲಿ ಸಭೆ

Views: 49

ಕನ್ನಡ ಕರಾವಳಿ ಸುದ್ದಿ: ಸಾಲಿಕೇರಿ ಕುಂಚಿಮನೆ ಎಸ್.ಸದಾಶಿವ ಶೆಟ್ಟಿಗಾರ್ ಅವರು ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಶಿಲ್ಪಿಗಳಾಗಿ, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದು, ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಸಹೃದಯತೆ ಹಾಗೂ ಸಜ್ಜನಿಕೆಯಿಂದ ಜೀವನದಲ್ಲಿ ಶ್ರೇಷ್ಠ ಸಂಸ್ಕಾರ, ಶಿಸ್ತು ಆದರ್ಶಗಳನ್ನು ರೂಪಿಸಿ, ನಮಗೆಲ್ಲರಿಗೂ ಸ್ಫೂರ್ತಿಯಾಗಿ, ಮಾರ್ಗದರ್ಶಕರಾಗಿ ಸದಾ ನಮ್ಮ ಶ್ರೇಯಸ್ಸನ್ನೇ ಹಾರೈಸಿ ಅಗಸ್ಟ್ 25 ರಂದು ನಮ್ಮನ್ನಗಲಿದ ಎಸ್. ಸದಾಶಿವ ಶೆಟ್ಟಿಗಾರ್ ಅವರ ಆತ್ಮ ಸದ್ಗತಿಗಾಗಿ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆಯು ದಿನಾಂಕ: 06-09-2026ನೇ ಆದಿತ್ಯವಾರ ಮಧ್ಯಾಹ್ನ 12.00 ಗಂಟೆಗೆ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ, ಶ್ರೀ ವೀರಭದ್ರ ಸಭಾಂಗಣದಲ್ಲಿ ಜರುಗಲಿದೆ. ಸಕಾಲದಲ್ಲಿ ಆಮಂತ್ರಣ ಸಿಗದ ಬಂಧು ಮಿತ್ರರು ಇದನ್ನೇ ವೈಯಕ್ತಿಕ ಆಮಂತ್ರಣವೆಂದು ತಿಳಿದು, ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರು.

Related Articles

Back to top button
error: Content is protected !!