ಸೃಜನಶೀಲತೆ

ಹಾಲಾಡಿಯಲ್ಲಿ ಸೀರೆ ಕುಚ್ಚು ,ಸೀರೆ ಬಾಕ್ಸ್ ಪೊಲ್ಡಿಂಗ್ ಕೌಶಲ್ಯ ತರಬೇತಿ

Views: 35

ಕನ್ನಡ ಕರಾವಳಿ ಸುದ್ದಿ: ಟಿ.ಎಂ.ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಗ್ರಾಮ ಪಂಚಾಯತ್ ಹಾಲಾಡಿ ಸಂಜೀವಿನಿ ಒಕ್ಕೂಟ ಹಾಲಾಡಿ ಇವರ ಆಯೋಜನೆಯಲ್ಲಿ 10 ದಿನಗಳ ಕಾಲ ಸೀರೆ ಕುಚ್ಚು ತರಬೇತಿ ಮತ್ತು ಸೀರೆ ಬಾಕ್ಸ್ ಪೊಲ್ಡಿಂಗ್ ಕೌಶಲ್ಯ ತರಬೇತಿ ಗ್ರಾಮ ಪಂಚಾಯತ್ ಸಭಾಂಗಣ ಹಾಲಾಡಿಯಲ್ಲಿ ಉದ್ಘಾಟನೆಗೊಂಡಿತು.

ತರಬೇತಿಯ ಉದ್ಘಾಟನೆಯನ್ನು ಹಾಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಲತಾ ಗಿಡಕ್ಕೆ ನೀರೂಣಿಸುವ ಮೂಲಕ ನೆರವೇರಿಸಿದರು. 10 ದಿನಗಳ ತರಬೇತಿಯ ಬಗ್ಗೆ ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ತರಬೇತುದಾರೆ ವೀಣಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ ಶುಭಹಾರೈಸಿದರು. ಒಟ್ಟು 30 ಜನ ಫಲಾನುಭವಿಗಳು ಭಾಗವಹಿಸಲಿದ್ದಾರೆ.

ಅನ್ನಪೂರ್ಣ, ವನಿತಾ, ಜ್ಯೋತಿ ಪ್ರಾರ್ಥಿಸಿ, ಕೃಷಿ ಸಖಿ ಶಾರದ ಸ್ವಾಗತಿಸಿದರು. ಸಂಜೀವಿನಿ ಎಂ.ಬಿ.ಕೆ ಜ್ಯೋತಿ ನಿರೂಪಿಸಿ, ವಂದಿಸಿದರು.

Related Articles

Back to top button
error: Content is protected !!