ಸಾಂಸ್ಕೃತಿಕ
ಬಿಜೂರು ಸಾಲಿಮಕ್ಕಿ ಸ್ವಾತಂತ್ರ್ಯ ದಿನಾಚರಣೆ: ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

Views: 13
ಬೈಂದೂರು :ತಾಲೂಕಿನ ಬಿಜೂರು ಗ್ರಾಮದ ಸಾಲಿಮಕ್ಕಿ ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಜರುಗಿತು.
ಪಾರ್ವತಿ ಕೆ.ಪೂಜಾರಿ ಅವರು ಪ್ರತಿ ವರ್ಷದಂತೆ ಅಂಗವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುಗೆ ನೀಡಿ, ವಿತರಿಸಿರುತ್ತಾರೆ.
ಬಾಲ ವಿಕಾಸ ಸಮಿತಿ ಅಧ್ಯಕ್ಷರು ಶ್ರೀಮತಿ ದಿವ್ಯ ಹಾಗೂ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಸುಶೀಲ ಬಿ. ಸಹಾಯಕಿ ದಾರು ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ರಮೇಶ್ ದೇವಾಡಿಗ , ಕೆ ಟಿ ರಾಜ್, ನಾಗೇಶ್ ನಾಯಕ್,ಮಂಜುನಾಥ ಹಾಗೂ ಸ್ತ್ರೀ ಶಕ್ತಿ ಸದಸ್ಯರು ಸಿಹಿ ತಿಂಡಿಯನ್ನು ವಿತರಿಸಿದರು.






