ಅಸೋಡು ಶಾಲೆ : ಧ್ವಜಾರೋಹಣ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ

Views: 4
ಕುಂದಾಪುರ :ಇಲ್ಲಿನ ಅಸೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರ್ಗಿ- ಕಾಳಾವರ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಧ್ವಜಾರೋಹಣ ಹಾಗೂ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅರುಣ ರಾಧಾಕೃಷ್ಣ ಶೇರಿಗಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಪ್ಪಯ್ಯ ಶೇರಿಗಾರ್,ಕೊರ್ಗಿ-ಕಾಳಾವರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ರತ್ನಾಕರ ಶೆಟ್ಟಿ, ಅಸೋಡು ಫ್ರೆಂಡ್ಸ್ ಅಧ್ಯಕ್ಷ ಶಿವಾನಂದ ಹೆಗ್ಡೆ, ಅಸೋಡು ನಂದಿಕೇಶ್ವರ ದೇವಳದ ಆಡಳಿತ ಧರ್ಮದರ್ಶಿ ಸುಜಿತ್ ಕುಮಾರ್ ಶೆಟ್ಟಿ, ಸಮಾಜ ಸೇವಕ ಅಜಿತ್ ಕುಮಾರ್ ಶೆಟ್ಟಿ, ಕುಂದಾಪುರ ಬದುಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಅಸೋಡು ಚಂದ್ರ ಪೂಜಾರಿ, ರಘುರಾಮ್ ಶೆಟ್ಟಿ, ಪಾರ್ವತಿ ಶೇರಿಗಾರ್, ಶಾಲಾ ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪುರದ ವಕೀಲರಾದ ಉಮೇಶ್ ಶೆಟ್ಟಿ ಶಾನಕಟ್ಟು ಅವರು, ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿದರು.
ಕೊರ್ಗಿ-ಕಾಳಾವರ ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.
ಕುಂದಾಪುರ ಬದುಕು ಚಾರಿ ಟೇಬಲ್ ಟ್ರಸ್ಟ್ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ಮತ್ತು ಸಿಹಿ ತಿಂಡಿ ವಿತರಿಸಿದರು.
ಶಾಲೆಯನ್ನು ದತ್ತು ಸ್ವೀಕರಿಸಿದ ಡಾ. ಅನಂತರಾಮ್ ಶೆಟ್ಟಿ ಅವರ ಭಾವಚಿತ್ರವನ್ನು ಅನಾವರಣ ಗೊಳಿಸಲಾಯಿತು.

ಕೊರ್ಗಿ-ಕಾಳಾವರ ಲಯನ್ಸ್ ಕ್ಲಬ್ ಸರ್ವ ಸದಸ್ಯರು, ಬದುಕು ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು. ಶಾಲಾ ಅಭಿವೃದ್ಧಿಯ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಮಿತಿ ಸದಸ್ಯರು,ಪೋಷಕರು, ಶಾಲಾ ಶಿಕ್ಷಕ ವೃಂದದವರು, ಅಂಗನವಾಡಿ,ದಾಸೋಹ ಕಾರ್ಯಕರ್ತೆಯರು ಉಪಸ್ಥಿತರಿದ್ದರು.






