ಸಾಂಸ್ಕೃತಿಕ

ಕುಂದಾಪುರ ರೋಟರಿ ಸನ್ ರೈಸ್ : ರಕ್ತ ವರ್ಗೀಕರಣ ಶಿಬಿರ

Views: 0

ಕುಂದಾಪುರ: ರೋಟರಿ ಕುಂದಾಪುರ ಸನ್‌ರೈಸ್ ವತಿಯಿಂದ ರಕ್ತ ವರ್ಗಿಕರಣ ಶಿಬಿರವನ್ನು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿಲಾಯಿತು.

ಸುಮಾರು 263 ವಿದ್ಯಾರ್ಥಿಗಳ ರಕ್ತವನ್ನು ಪರೀಕ್ಷಿಸಿ ಅವರ ರಕ್ತದ ಮಾದರಿಯನ್ನು   ಪರಿವೀಕ್ಷಿಸಲಾಯಿತು.

ರೋಟರಿ ಅಧ್ಯಕ್ಷರಾದ ರೋ. ನಾಗರಾಜ ನಾಯ್ಕ್, ಪ್ರಭಾರ ಪ್ರಾಂಶುಪಾಲರಾದ ಶ್ರೀ ಕಿರಣ ಹೆಗ್ದೆಯವರು ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಪಡೆಯಲು ತಿಳಿಸಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ರೋ. ನವೀನ ಡಿಸೋಜ, ರೋ. ರವಿಕುಮಾರ್, ರೋ. ಸುಜಿತ್ ಶೆಟ್ಟಿ, ಸದಸ್ಯರುಗಳಾದ ರೋ. ಶಿವಾನಂದ ಎಂ. ಪಿ., ರೋ. ಬಿ ಎಂ ಚಂದ್ರಶೇಖರ, ರೋ. ಪೂರ್ಣಿಮಾ ಭವಾನಿಶಂಕರ, ರೋ. ಗೀತಾ ಕೆ., ರೋ. ಗಿರಿಜಾ ಮಾಣಿಗೋಪಾಲ, ರೋ. ಭವಾನಿಶಂಕರ, ಹಿರಿಯ ಸದಸ್ಯರಾದ ರೋ. ಕೆ. ಎಚ್ ಚಂದ್ರಶೇಖರ, ರೋ. ಅರುಣ್, ರೋ. ಗಣೇಶ ಬೆಟ್ಟಿನ್ ಮತ್ತು ಶಾಲೆಯ ಇಂರ‍್ಯಾಕ್ಟ್ ಕ್ಲಬ್ಬಿನ ಸಂಯೋಜಕರಾದ ಶ್ರೀ ಪ್ರದೀಪಕುಮಾರ ಶೆಟ್ಟಿ, ದೈಹಿಕ ಶಿಕ್ಷಕರಾದ ಶ್ರೀ ಪ್ರಕಾಶಚಂದ್ರ ಶೆಟ್ಟಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button
error: Content is protected !!