ಕಾರಿಗೆ ಬರೋಬ್ಬರಿ 3,400 ಕಿಸ್ ಕೊಟ್ಟ ಪ್ರಿಯತಮೆ..5,500 ರೂ. ದಂಡ ಕಟ್ಟಿದ ಪ್ರಿಯಕರ
Views: 27
ಕನ್ನಡ ಕರಾವಳಿ ಸುದ್ದಿ :ರೀಲ್ಸ್‌ನಿಂದ ವೈರಲ್ ಆಗಲು ಇಲ್ಲೊಬ್ಬಳು ಯುವತಿ ಮಾಡಿದ ಯಡವಟ್ಟಿನಿಂದ ಬಾಯ್‌ಫ್ರೆಂಡ್‌ಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಆದಿತ್ಯ ಸಿಕರ್ವಾರ್ ತನ್ನ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬರೋಬ್ಬರಿ 3400 ಕಿಸ್‌ಗಳಿಂದ ಅಲಂಕಾರ ಮಾಡಿದ್ದಾನೆ. ನಂತರ ಅದೇ ಕಾರಿನ ರೀಲ್ಸ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ವೀಕ್ಷಣೆ ಪಡೆದಿದೆ. ಇದೇ ವೈರಲ್ ರೀಲ್ಸ್ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದ್ದು, ಆದಿತ್ಯನಿಗೆ ರೂ.5,500 ದಂಡ ವಿಧಿಸಿದ್ದಾರೆ.
ಕಾರಿನ ಬಾನೆಟ್, ಬಾಗಿಲು ಸೇರಿ ಸಂಪೂರ್ಣ ಕಾರಿನ ಮೇಲೆ 3400 ಕಿಸ್ ಗುರುತುಗಳನ್ನು ಆದಿತ್ಯನ ಗರ್ಲ್‌ಫ್ರೆಂಡ್ ಮೂಡಿಸಿದ್ದಾಳೆ. ಇದಕ್ಕೆ ಸರಿಸುಮಾರು ಮೂರುವರೆ ಗಂಟೆ ಸಮಯ ತೆಗೆದುಕೊಂಡಿದ್ದಾಳೆ. ನಂತರ ಲಿಪ್‌ಸ್ಟಿಕ್ ಕಾರನ್ನು ರಸ್ತೆಗೆ ತೆಗೆದುಕೊಂಡು ಹೋಗಿ, ಸ್ಪೀಡಾಗಿ ಚಾಲನೆ ಮಾಡುತ್ತಾ ರೀಲ್ಸ್ ಮಾಡಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದು, ಅಲ್ಲಿಯೇ ನೀರಿನಿಂದ ಕಾರಿನ ಮೇಲಿದ್ದ ಎಲ್ಲಾ 3400 ಲಿಪ್‌ಸ್ಟಿಕ್ ಗುರುತನ್ನು ಅವನಿಂದಲೇ ಕ್ಲೀನ್ ಮಾಡಿಸಿದ್ದಾರೆ. ರಸ್ತೆ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ಚಾಲನೆ ಮಾಡಿದ್ದಕ್ಕೆ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ರೂ.5,500 ದಂಡವನ್ನೂ ವಿಧಿಸಿದ್ದಾರೆ.






