ಸಾಂಸ್ಕೃತಿಕ

ತಾಳಮದ್ದಳೆಯಲ್ಲಿ ದೇಶಾಭಿಮಾನ ಮೂಡಿಸುವ ‘ಕಾಶ್ಮೀರ ವಿಜಯ’

Views: 0

370ನೇ ವಿಧಿ ರದ್ಧತಿಯನ್ನು ಬೆಂಬಲಿಸುವವರು ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಸ್ಥಾಪಿಸಲು ಬಯಸುವವರು ಎಂಬ ಎರಡು ಅಂಶಗಳನ್ನು ಪ್ರೇಕ್ಷಕರಿಗೆ ತಾಳಮದ್ದಳೆ ಮೂಲಕ ದೇಶಾಭಿಮಾನ ಮೂಡಿಸುವ ಪ್ರಯತ್ನ ಸುಧಾಕರ್ ಆಚಾರ್ಯ ಅವರ ವಿನೂತನ ಪ್ರಯೋಗ ನಡೆಯಲಿದೆ.

ಇದೇ ಅಗಸ್ಟ್ 15ರಂದು ಉಡುಪಿಯಲ್ಲಿ ಆಗಸ್ಟ್ 19 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮತ್ತು ಸೆಪ್ಟೆಂಬರ್ 18ರಂದು ಕುಂದಾಪುರ ತಾಲೂಕಿನ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಕಾಶ್ಮೀರ ವಿಜಯ’ ತಾಳಮದ್ದಳೆ ಆಯೋಜಿಸಲಾಗಿದೆ.

ಸುಧಾಕರ ಆಚಾರ್ಯ

ತಾಳಮದ್ದಳೆಯಲ್ಲಿ ನೆಹರು, ಮಹಾತ್ಮ ಗಾಂಧಿ, ಜಿನ್ನಾ ,ಸರ್ದಾರ್ ವಲ್ಲಭಬಾಯಿ ಪಟೇಲ್, ಲಾರ್ಡ್ ಮೌಂಟ್ ಬ್ಯಾಟನ್, ಹೈದರಾಬಾದ್ ನಿಜಾಮ, ಸತ್ಯಪಾಲ್ ಮಲಿಕ್, ಜಮ್ಮು ಮತ್ತು ಕಾಶ್ಮೀರದ ಪ್ರತಿನಿಧಿ ಮಾಜಿ ಗವರ್ನರ್ ಮತ್ತು ಕಾಶ್ಮೀರದ ಕೇಂದ್ರ ವಿಶೇಷ ಪ್ರತಿನಿಧಿ ದಿನೇಶ್ವರ್ ಶರ್ಮಾ ಅವರಂತಹ ಹಲವಾರು ಪಾತ್ರಗಳನ್ನು ಚಿತ್ರಿಸಲಾಗಿದೆ.

ತಾಳಮದ್ದಳೆ ಮೂಲಕ ಜನರಲ್ಲಿ ದೇಶಾಭಿಮಾನವನ್ನು ಮೆರೆದಿರುವುದು ಸಂತಸ ತಂದಿದೆ. ಆ ಮೂಲಕ ಐತಿಹಾಸಿಕ ಘಟನೆಗಳನ್ನು ಪ್ರಸ್ತುತಪಡಿಸುವುದು ಸವಾಲಾಗಿದೆ ಎಂದು ಯಕ್ಷಗಾನ ಕಲಾವಿದ ಎಂಎಲ್ ಸಾಮಗ ತಿಳಿಸಿದ್ದಾರೆ.

Related Articles

Back to top button
error: Content is protected !!