ಸಾಂಸ್ಕೃತಿಕ

ಚಿತ್ರನಟಿ ಮಾಲಾಶ್ರೀ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ

Views: 0

ಕುಂದಾಪುರ: ಕನ್ನಡ ಚಿತ್ರರಂಗದ ಖ್ಯಾತ ಚಿತ್ರ ನಟಿ ಮಾಲಾಶ್ರೀ ಮತ್ತು ಕುಟುಂಬಿಕರು ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇವಾಲಯದ ಆಡಳಿತ ಮೊಕ್ತೇಸರರಾದ ಶ್ರೀ ರಮಣ ಉಪಾಧ್ಯಾಯ, ಮಾಜಿ ಮೊಕ್ತೇಸರರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಶ್ರೀಶ ಉಪಾಧ್ಯಾಯ, ಅರ್ಚಕ ವೃಂದದವರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚಿತ್ರನಟಿ ಮಾಲಾಶ್ರೀ,ಅವರ ಪುತ್ರಿ ಹಾಗೂ ಕುಟುಂಬಿಕರಿಗೆ ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.

Related Articles

Back to top button
error: Content is protected !!