ಸಾಂಸ್ಕೃತಿಕ

ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಯಕ್ಷ ಮುಂಗಾರು” ಯಕ್ಷಗಾನ ಕಾರ್ಯಕ್ರಮ

Views: 70

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಯಕ್ಷ ಮುಂಗಾರು” ಯಕ್ಷಗಾನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಸಮಾರಂಭದಲ್ಲಿ ವಕ್ವಾಡಿ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಮಂಡಳಿಯ ಸ್ಥಾಪಕರು, ಹಿರಿಯರಾದ ಮಂಜುನಾಥ ಆಚಾರ್ಯ ಅವರನ್ನು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣ ಐತಾಳರು ಸನ್ಮಾನಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತ್ಯ ರಂಜನ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಮೇಶ್ ಶೆಟ್ಟಿ ವಕ್ವಾಡಿ, ನಾಗರಾಜ್ ಆಚಾರ್ಯ, ಮೇಳದ ಭಾಗವತರು ಉಪಸ್ಥಿತರಿದ್ದರು.

ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಈ ಕಾರ್ಯಕ್ರಮದ ಕ್ರಮದ ಜವಾಬ್ದಾರಿಯನ್ನು ಸುಬ್ರಹ್ಮಣ್ಯ ಆಚಾರ್ಯ ವಹಿಸಿದ್ದರು.

Related Articles

Back to top button
error: Content is protected !!