ಶಿಕ್ಷಣ
ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆ: “ಬ್ಲೂ ಡೇ” “ರೈನಿ ಡೇ” ಸಂಭ್ರಮ ಆಚರಣೆ
Views: 43
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ನಲ್ಲಿ ಜುಲೈ 24 ಶುಕ್ರವಾರದಂದು ಬ್ಲೂ ಡೇ ಹಾಗೂ ರೈನಿ ಡೇ ಸಂಭ್ರಮದಿಂದ ಆಚರಿಸಲಾಯಿತು.
ಮಕ್ಕಳು ನೀಲಿ ಬಣ್ಣದ ಉಡುಗೆಯನ್ನು ತೊಟ್ಟು ನೀಲಿ ಬಣ್ಣಕ್ಕೆ ಸಂಬಂಧಿಸಿದ ವಿವಿಧ ಆಟಿಕೆಗಳು, ಛತ್ರಿಗಳು ಹಾಗೂ ಕರಕುಶಲ ವಸ್ತುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರು. ನಂತರ ಮಕ್ಕಳು ತಂದಿರುವ ಕರಕುಶಲ ವಸ್ತುಗಳನ್ನು ಹಾಗೂ ಆಟಿಕೆಗಳನ್ನು ಅಲಂಕರಿಸಲಾಯಿತು. ನಂತರ ಮಕ್ಕಳು ತಾವು ತಂದಿರುವ ವಸ್ತುಗಳ ಬಗ್ಗೆ ಮಾತನಾಡಿದರು.ಮಕ್ಕಳು ಬ್ಲೂ ಡೇಗೆ ಸಂಬಂಧಿಸಿದ ಹಾಡಿನೊಂದಿಗೆ ಮಳೆಯಲ್ಲಿ ನರ್ತಿಸಿ ಸಂಭ್ರಮಿಸಿದರು.
ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಇವರು ನೀಲಿ ಬಣ್ಣದ ಕುರಿತು ಮಾತನಾಡಿದರು. ಶ್ರೀಮತಿ ರಜನಿ ಅಶೋಕ್ ಅವರು ಸ್ವಾಗತಿಸಿದರು. ಶ್ರೀಮತಿ ವೈಶಾಲಿ ಶೆಟ್ಟಿ ನಿರೂಪಿಸಿದರು.ಹಾಗೂ ಶ್ರೀಮತಿ ಸುಜಾತಾ ವಂದಿಸಿದರು.






