ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ ₹87.22 ಲಕ್ಷ ಹಣ ಪಡೆದು ವಂಚಿಸಿದ ಯುವತಿ
Views: 40
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ ₹87.22 ಲಕ್ಷ ಹಣ ಪಡೆದು ವಂಚಿಸಿದ ಆರೋಪ ಯುವತಿಯೊಬ್ಬಳ ವಿರುದ್ಧ ಕೇಳಿಬಂದಿದೆ.
ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ ಬೆಳ್ತಂಗಡಿ ಮೂಲದ ಅನನ್ಯ ಕೃಷ್ಣ ಎಂಬ ಯುವಕನಿಗೆ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಅನಿಷಾ ಪಾಲನ್ನ ಎಂಬ ಯುವತಿ ಪರಿಚಯವಾಗಿದ್ದಳು ಎನ್ನಲಾಗಿದೆ. ಪರಿಚಯದ ಬಳಿಕ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಮದುವೆಯಾಗುವುದಾಗಿ ಯುವತಿ ನಂಬಿಸಿ ವಂಚನೆ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನ್ನ ವ್ಯಾಪಾರದಲ್ಲಿ ಬಹು ದೊಡ್ಡ ಸಮಸ್ಯೆಯಾಗಿದೆ ಎಂದು ಯುವತಿ ಆತನಲ್ಲಿ ಹೇಳಿಕೊಂಡಿದ್ದಳು, ಅದಕ್ಕೆ ಸಮಸ್ಯೆಯಲ್ಲಿರುವ ಯುವತಿಗೆ ಸಹಾಯ ಮಾಡಲು ಯುವಕ ಮುಂದ್ದಾಗಿದ್ದ, ಈ ವೇಳೆ ಯುವತಿ, ಯುವಕನಿಂದ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಗೂಗಲ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾಳೆ ಎನ್ನಲಾಗಿದೆ. ಒಟ್ಟು ₹87,22,710 ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾಳೆ.
ಹಣ ವರ್ಗಾವಣೆಯಾದ ಬಳಿಕ ಯುವತಿ ಮೊಬೈಲ್ ಆಫ್ ಮಾಡಿ ಸಂಪರ್ಕಕ್ಕೆ ಸಿಗದೆ ಪರಾರಿಯಾಗಿದ್ದಾಳೆ. ತನಗೆ ಮೋಸವಾಗಿರುವುದು ತಿಳಿಯುತ್ತಿದಂತೆ ಅನನ್ಯ ಕೃಷ್ಣ ಈ ಕುರಿತು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಹಣ ಪಡೆದು ಪರಾರಿಯಾದ ಮಹಿಳೆಗೋಸ್ಕರ ಹುಡುಕಾಟ ನಡೆಸುತ್ತಿದ್ದಾರೆ.






