ಕೊರ್ಗಿ-ಕಾಳಾವರ ಲಯನ್ಸ್ ಕ್ಲಬ್: ಕೊರ್ಗಿ ಶಾಲಾ ವಠಾರದಲ್ಲಿ ವನಮಹೋತ್ಸವ

Views: 7
ಕುಂದಾಪುರ : ಕೊರ್ಗಿ- ಕಾಳಾವರ ಲಯನ್ಸ್ ಕ್ಲಬ್ ವತಿಯಿಂದ ಆಗಸ್ಟ್ 8 ರಂದು ಮಂಗಳವಾರ ಕೊರ್ಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯರಿಗೆ 200ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ರತ್ನಾಕರ ಶೆಟ್ಟಿ ಅವರು ಗಿಡಗಳನ್ನು ವಿತರಿಸಿ ಮಾತನಾಡಿ, ಈ ಭೂಮಿಯ ಮೇಲೆ ಮನುಷ್ಯ ತನ್ನಂತೆ ಇತರ ಜೀವಿಗಳು ಬದುಕುವ ಹಕ್ಕನ್ನು ಹೊಂದಿದ್ದಾರೆ. ಗಿಡ ನೆಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಲು ಕಡಿದ ಮರಕ್ಕೆ ಸಮನಾಗಿ ಹೊಸ ಗಿಡಗಳನ್ನು ಬೆಳೆಸಿ, ಪರಿಸರ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಕೆಟ್ಟ ಹವಾ ಇಂಗಾಲದ ಡೈ ಆಕ್ಸೈಡ್ ನ್ನು ಮರ-ಗಿಡಗಳು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಹೊರಗೆ ಬಿಡುತ್ತದೆ. ಇತ್ತೀಚಿನ ಹವಾಮಾನದ ವೈಪರಿತ್ಯದಿಂದ ಅತಿವೃಷ್ಠಿ ಮತ್ತು ಅನಾವೃಷ್ಠಿ ಯನ್ನು ತಡೆದು ಉತ್ತಮ ಜನಜೀವನವನ್ನು ನಡೆಸಲು ಇಂತಹ ಕಾರ್ಯಕ್ರಮದ ಮೂಲಕ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುದೀರ್ ಶೆಟ್ಟಿ ಮಲ್ಯಾಡಿ, ಕೋಶಾಧಿಕಾರಿ ಸುಖಾನಂದ ಹೆಗ್ಡೆ, ದಿನಕರ ಹೆಗ್ಡೆ,ಉಮಾನಾಥ್ ಹೆಗ್ಡೆ, ನಾಗರಾಜ್ ಶೆಟ್ಟಿ, ಸುಧೀರ್ ಮಲ್ಯಾಡಿ, ಅಶೋಕ್ ಹೂವಿನಕೆರೆ, ಭಾಸ್ಕರ್ ಶೆಟ್ಟಿ, ಚತುರ್ ಶೆಟ್ಟಿ, ಗೌರೀಶ ಹೆಗ್ಡೆ, ರವೀಂದ್ರ ಶೆಟ್ಟಿ, ಸಂಕೇತ್ ಶೆಟ್ಟಿ, ಶರತ್ ಶೆಟ್ಟಿ, ವೈಭವ ಶೆಟ್ಟಿ, ಅರುಣ್ ಕಾಳಾವರ, ಪುನೀತ್ ಶೆಟ್ಟಿ, ಸುಧಾಕರ್ ಶೆಟ್ಟಿ,ಸುಜಿತ್ ಶೆಟ್ಟಿ, ಸುನಿಲ್ ಶೆಟ್ಟಿ, ರಾಕೇಶ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಹಾಗೂ ಶಾಲಾ ಮುಖ್ಯ ಶಿಕ್ಷಕ ಜಯಕರ್ ಶೆಟ್ಟಿ, ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರತಾಪ್ ಮತ್ತು ವೈದ್ಯಕೀಯ ಸಿಬ್ಬಂದಿಗಳು, ಶಾಲಾ ಶಿಕ್ಷಕ ವೃಂದದವರು, ಪೋಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.






