ಜನಮನ

ಕುಂದಾಪುರ: ಕಾಲೇಜಿಗೆ ಹೋಗಿ ಟಿಸಿ ತರುತ್ತೇನೆ ಎಂದು ಮನೆಯಿಂದ ತೆರಳಿದ್ದ ಯುವಕ ನಾಪತ್ತೆ 

Views: 308

ಕನ್ನಡ ಕರಾವಳಿ ಸುದ್ದಿ: ಕಾಲೇಜಿಗೆ ಹೋಗಿ ಟಿಸಿ ತರುತ್ತೇನೆ ಎಂದು ಮನೆಯಿಂದ ತೆರಳಿದ್ದ 23 ವರ್ಷದ ಯುವಕನೊಬ್ಬ ನಾಪತ್ತೆಯಾಗಿದ್ದು, ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಾರ್ ಬೆಟ್ಟು, ಉಪ್ಪಿನಕುದ್ರು ಗ್ರಾಮದ ನಿವಾಸಿ ಸುಹಾಸ್ (23) ಜುಲೈ 13ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬಳಿಕ ಅವರು ಮನೆಗೆ ಮರಳಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೊದಲು ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ತಡವಾಗಿ ದೂರು ದಾಖಲಿಸಲಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

5 ಅಡಿ 9 ಇಂಚು ಎತ್ತರವಿದ್ದು,ನೇರಳೆ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ

ಕುಂದಾಪುರ ಪೊಲೀಸ್ ಠಾಣೆ: 08254 230338

ಡಿ.ವೈ.ಎಸ್.ಪಿ ಕುಂದಾಪುರ ವಿಭಾಗ:9480805422

ಪಿ. ಐ ಕುಂದಾಪುರ ಠಾಣೆ: 9480805455

ಪಿ.ಎಸ್. ಐ ಕುಂದಾಪುರ ಠಾಣೆ : 8277988957

ಪಿ.ಎಸ್. ಐ ಕುಂದಾಪುರ ಠಾಣೆ: 8277988959

Related Articles

Back to top button
error: Content is protected !!